ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಕೊಡುಗೆ ನೀಡಿದ ಇನ್ಫೋಸಿಸ್‌

ಗುರುವಾರ, 6 ಅಕ್ಟೋಬರ್ 2022 (10:35 IST)
ಪಂಜಾಬ್ : ಇಲ್ಲಿನ ಮೊಗಾ ಜಿಲ್ಲೆಯಲ್ಲಿ ಶಾಲಾ ಶಿಕ್ಷಣವನ್ನು ಆಧುನೀಕರಿಸಲು ಇನ್ಫೋಸಿಸ್, ಸರ್ಕಾರಿ ಶಾಲೆಗಳಿಗೆ 150 ಕಂಪ್ಯೂಟರ್ಗಳನ್ನು ವಿತರಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಮತ್ತು ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು ಈ ನೆರವಿನ ಮುಖ್ಯ ಉದ್ದೇಶವಾಗಿದೆ ಎಂದು ಆಡಳಿತ ತಿಳಿಸಿದೆ. ಮೊಗಾ ಜಿಲ್ಲೆ ಡಿಸಿ ಕುಲವಂತ್ ಸಿಂಗ್ ಮಾತನಾಡಿ, ಅಭಿವೃದ್ಧಿಗಾಗಿ ʻಆಕಾಂಕ್ಷೆಯ ಜಿಲ್ಲೆʼ ಎಂದು ಕೇಂದ್ರವು ಆಯ್ಕೆ ಮಾಡಿರುವ ಜಿಲ್ಲೆಗಳಲ್ಲಿ ಮೊಗಾವು ಸೇರಿದೆ. 

ಇನ್ಫೋಸಿಸ್ ಮೊಗಾ ಜಿಲ್ಲೆಗೆ ಇದುವರೆಗೆ 350 ಕಂಪ್ಯೂಟರ್ಗಳನ್ನು ಒದಗಿಸಿದ್ದು, ಇದರಲ್ಲಿ ಕಳೆದ ವರ್ಷ 200 ಕಂಪ್ಯೂಟರ್ಗಳನ್ನು ಸರ್ಕಾರಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿತ್ತು.
ಈಗ ಪಡೆದ 150 ಕಂಪ್ಯೂಟರ್ಗಳನ್ನು ಶೀಘ್ರದಲ್ಲೇ ಶಾಲೆಗಳಿಗೆ ಹಂಚಿಕೆ ಮಾಡಲಾಗುವುದು. ಈ ಕ್ರಮದಿಂದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಡಿಸಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ