ಸುಧಾಮೂರ್ತಿಯವರು ಜನರಿಗಾಗಿ ಏನೆಲ್ಲ ಮಾಡಿದ್ದಾರೆ, ಮಾಡುತ್ತಿದ್ದಾರೆ ಅನ್ನೋದು ಬಿಗ್ ಬಿ ಗೆ ಚೆನ್ನಾಗಿ ಗೊತ್ತಿದೆ.
ಅದಕ್ಕೆ ಮತ್ತೊಂದು ಸಾಕ್ಷಿಯೆಂದರೆ ಜಯದೇವ ಹೃದ್ರೋಗ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಸುಸಜ್ಜಿತ 350 ಬೆಡ್ ಸಾಮರ್ಥ್ಯದ ಈ ಹೆಚ್ಚುವರಿ ಹೃದ್ರೋಗ ಘಟಕ.
ಹಿಂದೊಮ್ಮೆ ಸುಧಾಮೂರ್ತಿ ಅವರು ತಮ್ಮ ಪತಿ ಹಾಗೂ ಇನ್ಫೋಸಿಸ್ ಸಂಸ್ಥೆ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಬೇರೆ ಬೇರೆ ಊರುಗಳಿಂದ ಬಂದಿದ್ದ ಅನೇಕ ಬಡ ಜನರಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವುದನ್ನು ಗಮನಿಸಿದ್ದರು. ಆಗಲೇ ಅವರು ಒಂದು ಹೆಚ್ಚುವರಿ ಘಟಕ ಸ್ಥಾಪಿಸಲು ನಿರ್ಧರಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಅದರ ಫಲವೇ ಈ ಆಸ್ಪತ್ರೆ.
ಎಮರ್ಜೆನ್ಸಿ ಆಬ್ಸರ್ವೇಷನ್ ಯುನಿಟ್, ಓಪಿಡಿ, ಲ್ಯಾಬ್ ಸೇರಿದಂತೆ ಅನೇಕ ಸೌಲಭ್ಯಗಳು ಕೇಂದ್ರದಲ್ಲಿವೆ. ಜಯದೇವ ಹೃದ್ರೋಗ ಸಂಸ್ಥೆಯ ಚೀಫ್ ಡಾ ಸಿ ಎನ್ ಮಂಜುನಾಥ ಅವರು ಸೋಮವಾರ ಈ ಘಟಕವನ್ನು ಮಾಧ್ಯಮದವರಿಗೆ ತೋರಿಸಿದರು.