ಕೊರೋನಾ ಹೋರಾಟಕ್ಕೆ ಇನ್ಫೋಸಿಸ್, ಟ್ವಿಟರ್ ನಿಂದ ತಲಾ 100 ಕೋಟಿ ದೇಣಿಗೆ

ಮಂಗಳವಾರ, 11 ಮೇ 2021 (10:01 IST)
ನವದೆಹಲಿ: ಕೊರೋನಾ ವಿರುದ್ಧ ಹೋರಾಡಲು ಇನ್ಫೋಸಿಸ್ ಮತ್ತು ಟ್ವಿಟರ್ ಸಂಸ್ಥೆಗಳು ತಲಾ 100 ಕೋಟಿ ರೂ. ದೇಣಿಗೆ ನೀಡಿದೆ.


ಇನ್ಫೋಸಿಸ್ ಕಳೆದ ಬಾರಿ ಲಾಕ್ ಡೌನ್ ವೇಳೆಯೂ 100 ಕೋಟಿ ದೇಣಿಗೆ ನೀಡಿತ್ತು. ಅಲ್ಲದೆ, ಸುಧಾಮೂರ್ತಿ ನೇತೃತ್ವದಲ್ಲಿ ಹಲವು ಸಾಮಾಜಿಕ ಕೆಲಸಗಳನ್ನು ಮಾಡಲಾಗಿತ್ತು. ಈ ಬಾರಿಯೂ 100 ಕೋಟಿ ಕೊಡುಗೆ ನೀಡಿರುವ ಸಂಸ್ಥೆ ತಮ್ಮ ಸಂಸ್ಥೆಯ ಶಾಖೆ ಇರುವ ಸ್ಥಳಗಳಲ್ಲಿ ಆಕ್ಸಿಜನ್ ಖರೀದಿ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಕ್ಕಾಗಿ ಬಳಸಿಕೊಳ್ಳಲಿದೆ.

ಟ್ವಿಟರ್ ಕೂಡಾ 15 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ 110 ಕೋಟಿ ರೂ. ದೇಣಿಗೆ ನೀಡಿದ್ದು, ಭಾರತದ ಕೊರೋನಾ ಹೋರಾಟಕ್ಕೆ ಕೈ ಜೋಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ