ಸಲಿಂಗ ಮದುವೆ ಸಾಂವಿಧಾನಿಕ ಹಕ್ಕಿಗೆ ಸಂಬಂಧಿಸಿದೆ : ಪೀಠಕ್ಕೆ ಅರ್ಜಿ

ಮಂಗಳವಾರ, 14 ಮಾರ್ಚ್ 2023 (10:26 IST)
ನವದೆಹಲಿ : ಸಲಿಂಗ ವಿವಾಹ ಸಾಂವಿಧಾನಿಕ ಸ್ವರೂಪದ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿದೆ ಆದ್ದರಿಂದ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠವು ಇದರ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಆದೇಶಿಸಿದೆ.
 
ಸಲಿಂಗ ವಿವಾಹವನ್ನು ವಿರೋಧಿಸಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಿದ ಪೀಠ, ಪ್ರಕರಣವು ಸ್ವಾಭಾವಿಕ ಸಾಂವಿಧಾನಿಕ ಅರ್ಹತೆಯ ಪ್ರಕಾರ ಮದುವೆಯಾಗುವ ಹಕ್ಕಿಗೆ ಸಂಬಂಧಿಸಿದೆ.

ಸಂವಿಧಾನದ ಕಲಂ 145(3) ಅಡಿಯಲ್ಲಿ 5 ನ್ಯಾಯಾಧೀಶರ ಪೀಠ ಈ ಸಮಸ್ಯೆಯನ್ನು ಪರಿಹರಿಸಲಿದೆ. ಈ ಹಿನ್ನಲೆಯಲ್ಲಿ ಸಾಂವಿಧಾನಿಕ ಪೀಠದಲ್ಲಿ ಅರ್ಜಿ ಪ್ರಸ್ತಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ