ಗ್ಯಾನವ್ಯಾಪಿ ನೆಲಮಾಳಿಗೆಯಲ್ಲಿ ವಿಗ್ರಹಗಳ ಸ್ಥಾಪನೆ

geetha

ಶನಿವಾರ, 3 ಫೆಬ್ರವರಿ 2024 (18:42 IST)
ವಾರಣಾಸಿ : ಗ್ಯಾನವಾಪಿ ಮಸೀದಿಯಲ್ಲಿ ಎಎಸ್‌ಐ  ಉತ್ಖನನದ ವೇಳೆ  ದೊರೆತ ಎಂಟು ದೇವತಾ ವಿಗ್ರಹಗಳನ್ನುಮಸೀದಿಯ ನೆಲಮಾಳಿಗೆಯಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ವಿಗ್ರಹಗಳೂ ಭಗ್ನಗೊಂಡ ಸ್ಥಿತಿಯಲ್ಲಿ ದೊರೆತಿದೆ. ವಿಷ್ಣುವಿನ ಒಂದು ವಿಗ್ರಹ, ಗಣೇಶನ ಒಂದು ವಿಗ್ರಹ, ನುಮಂತನ ಎರಡು ವಿಗ್ರಹ , ಲಕ್ಷ್ಮಿಯ ಒಂದು ವಿಗ್ರಹ, ಹಾಗೂ ಎರಡು ಶಿವಲಿಂಗಗಳು ಗ್ಯಾನವಾಪಿ ಮಸೀದಿಯಲ್ಲಿ ದೊರೆತಿತ್ತು. ಅಷ್ಟೂ ವಿಗ್ರಹಗಳನ್ನು ಈಗ ನೆಲಮಾಳಿಗೆಯಲ್ಲಿ ಸ್ಥಾಪಿಸಲಾಗಿದೆ. ರಾಮನ ಹೆಸರು ಬರೆದಿರುವ ಒಂದು ಕಲ್ಲು ಚಪ್ಪಡಿಯೂ ಸಹ ಉತ್ಖನನದ ವೇಳೆ ದೊರೆಕಿತ್ತು. ಈಗ ಆ ಕಲ್ಲಿನ ಬರಹವೂ ಸಹ ಪೂಜೆಗೊಳಗಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ