ಆಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿರುವ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಮರು ಟ್ವಿಟ್ ಮಾಡಿದ ನಂತರ ಉಭಯರ ನಡುವೆ ಟ್ವೀಟ್ ಸಮರವೇ ನಡೆದಿದೆ.
ನನಗೆ ಝಡ್ ಶ್ರೇಣಿಯ ಭದ್ರತೆ ನೀಡಲಾಗಿಲ್ಲ. ಮುಂದಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮರು ಪೋಸ್ಟ್ ಟ್ವೀಟ್ ಮಾಡಿದ್ದಾರೆ ಇರಾನಿ ಟ್ವೀಟ್‌ಗೆ ಮಾರುತ್ತರವಾಗಿ, ನನಗೆ ಗೃಹ ಸಚಿವಾಲಯದ ಅಂತರಿಕ ಕಾರ್ಯನಿರ್ವಹಣೆ ಬಗ್ಗೆ ಗೊತ್ತಿಲ್ಲ. ಮಾಧ್ಯಮಗಳಿಂದ ಗೊತ್ತಾಗಿದ್ದರಿಂದ ಹಾಗೇ ಕೇಳಿದ್ದೇನೆ ಎಂದಿದ್ದಾರೆ.
ಸ್ಮೃತಿ ಇರಾನಿಯವರೇ ಹಾಗಾದಲ್ಲಿ ನಿಮಗೆ ಯಾವುದೇ ಭದ್ರತೆ ಇಲ್ಲವೇ ಎಂದು ಚತುರ್ವೇದಿ ಮರು ಟ್ವೀಟ್ ಮಾಡಿದ್ದಾರೆ. ಇದರಿಂದ ಕೆಂಡಾಮಂಡಲಾದ ಸಚಿವ ಇರಾನಿ, ನನ್ನ ಭದ್ರತೆಯ ಯಾಕೆ ಅಷ್ಟೊಂದು ಆಸಕ್ತಿ ತೋರಿಸುತ್ತಿದ್ದಾರಾ? ಏನಾದರೂ ಪ್ಲ್ಯಾನ್ ಹಾಕಿದ್ದೀರಾ ಎಂದು ಮರು ಟ್ವೀಟ್ ಮಾಡಿದ್ದಾರೆ.
ಆಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿರುವುದು ರಾಹುಲ್ ಹಣೆಬರಹ, ಶುಭವಾಗಲಿ ಎಂದು ಸ್ಮತಿ ಟ್ವಿಟ್ ಮಾಡಿದ್ದರೆ, ಅದಕ್ಕುತ್ತರವಾಗಿ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ ಸಚಿವೆಯಾಗಿ ಮೆರೆಯತ್ತಿರುವುದು ನಿಮ್ಮ ಹಣೆಬರಹ, ನಿಮಗೆ ಒಳ್ಳೆಯದಾಗಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.