ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?

ಗುರುವಾರ, 7 ಸೆಪ್ಟಂಬರ್ 2023 (08:43 IST)
ನವದೆಹಲಿ : ಸಂವಿಧಾನದ 1ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಇಂಡಿಯಾ ಪದವನ್ನು ಅಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಈ ಹೊತ್ತಲ್ಲೇ ಇಂಡಿಯಾ ಹೆಸರಿನ ಮೇಲೆ ಹಕ್ಕನ್ನು ಪಾಕಿಸ್ತಾನ ಪ್ರತಿಪಾದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಇಂಡಿಯಾ ಹೆಸರನ್ನು ವಿಶ್ವಸಂಸ್ಥೆ ಮಟ್ಟದಲ್ಲಿ ಭಾರತ ಅಧಿಕೃತವಾಗಿ ಕೈಬಿಟ್ಟಲ್ಲಿ, ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸಲು ಯತ್ನಿಸಬಹುದು ಎನ್ನಲಾಗುತ್ತಿದೆ. ಇಂಡಿಯಾ ಎಂಬ ಪದ ಇಂಡಸ್ ಪ್ರಾಂತ್ಯವನ್ನು ಸೂಚಿಸುತ್ತದೆ. ಪ್ರಸ್ತುತ ಈ ಪ್ರಾಂತ್ಯ ಪಾಕಿಸ್ತಾನದಲ್ಲಿದೆ.

ಭಾರತ ದೇಶ ಸ್ವಾತಂತ್ರ್ಯಗೊಂಡಾಗ ಬ್ರಿಟೀಷರು ಇಂಡಿಯಾ ಎಂದು ಕರೆದರು. ಅದಕ್ಕೆ ಆಗಲೇ ಮಹಮ್ಮದ್ ಅಲಿ ಜಿನ್ನಾ ವಿರೋಧ ವ್ಯಕ್ತಪಡಿಸಿದ್ದರು. ಅದು ಇಂಡಿಯಾ ಆಗುವುದಿಲ್ಲ ಹಿಂದೂಸ್ತಾನ ಆಗುತ್ತದೆ. ಭಾರತ ಎಂದೇ ಕರೆಯಿರಿ ಎಂದು ಜಿನ್ನಾ ಆಗ್ರಹಿಸಿದರು ಎಂದು ಸೌತ್ ಏಷ್ಯಾ ಇಂಡೆಕ್ಸ್ ತಿಳಿಸಿದೆ.

ಮೌಂಟ್ಬ್ಯಾಟನ್ಗೆ ಜಿನ್ನಾ ಬರೆದ ಪತ್ರದಲ್ಲಿ, ಹಿಂದೂಸ್ತಾನ ಕೆಲವೊಂದು ನಿಗೂಢ ಕಾರಣಗಳಿಂದ ಇಂಡಿಯಾವನ್ನು ಸ್ವೀಕರಿಸಿದೆ. ಇದು ಹಾದಿ ತಪ್ಪಿಸುವ ಕೆಲಸ. ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ಇಂಡಿಯಾ ಹೆಸರನ್ನು ಭಾರತ ಸ್ವೀಕರಿಸಿದೆ ಎಂದು ವ್ಯಾಖ್ಯಾನಿಸಿದ್ದರು ಅಂತಾ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ