ಏಷ್ಯಾ ಕಪ್ ಕ್ರಿಕೆಟ್: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮೊಹಮ್ಮದ್ ಶಮಿಗೆ ಕೊಕ್?

ಬುಧವಾರ, 6 ಸೆಪ್ಟಂಬರ್ 2023 (09:40 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನ ಸೂಪರ್ ಫೋರ್ ಹಂತದಲ್ಲಿ ಟೀಂ ಇಂಡಿಯಾ ಭಾನುವಾರ ಪಾಕಿಸ್ತಾನ ವಿರುದ್ಧ ಆಡಲಿದೆ.

ಈ ಪಂದ್ಯಕ್ಕೆ ಮತ್ತೆ ಹಿರಿಯ ವೇಗಿ ಮೊಹಮ್ಮದ್ ಶಮಿಗೆ ಕೊಕ್ ನೀಡುವ ಸಾಧ‍್ಯತೆಯಿದೆ. ಕಳೆದ ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಶಮಿಗೆ ಕೊಕ್ ನೀಡಲಾಗಿತ್ತು. ಆದರೆ ನೇಪಾಳ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಶಮಿಗೆ ಅವಕಾಶ ನೀಡಲಾಗಿತ್ತು.

ಈ ಪಂದ್ಯದಲ್ಲಿ ಶಮಿ ಪಡೆದಿದ್ದು 1 ವಿಕೆಟ್ ಆದರೂ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ ಅಗತ್ಯ ಸಂದರ್ಭದಲ್ಲಿ ಬ್ರೇಕ್ ನೀಡಿದ್ದರು. ಹೀಗಾಗಿ ಪಾಕ್ ವಿರುದ್ಧದ ಪಂದ್ಯಕ್ಕೆ ಶಾರ್ದೂಲ್ ಅವರಿಗೇ ಮೊದಲ ಪ್ರಾಶಸ್ತ್ಯ ನೀಡಬಹುದು. ಹೀಗಾದಲ್ಲಿ ಮತ್ತೆ ಶಮಿ ಬೆಂಚ್ ಕಾಯಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ