ಏಷ್ಯಾ ಕಪ್ ಮೊದಲ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

ಗುರುವಾರ, 7 ಸೆಪ್ಟಂಬರ್ 2023 (08:20 IST)
ಲಾಹೋರ್: ಏಷ್ಯಾ ಕಪ್ ಕ್ರಿಕೆಟ್ ನ ಮೊದಲ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಈ ಮೂಲಕ ಏಷ್ಯಾ ಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ 114 ನೆಯ ಗೆಲುವು ಸಾಧಿಸಿ ಒಂದೇ ತಂಡದ ವಿರುದ್ಧ ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ಗೆಲುವು ಸಂಪಾದಿಸಿದ ದಾಖಲೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 38.4 ಓವರ್ ಗಳಲ್ಲಿ 193 ರನ್ ಗಳಿಸಿತು. ಶಕೀಬ್ ಅಲ್ ಹಸನ್ 53, ಮುಷ್ಫಿಕರ್ ರಹೀಂ 64 ರನ್ ಗಳಿಸಿದರು. ಪಾಕಿಸ್ತಾನ ಪರ ಮಾರಕ ದಾಳಿ ಸಂಘಟಿಸಿದ ಹ್ಯಾರಿಸ್ ರೌಫ್ 4, ನಸೀಂ ಶಾ 3 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಪಾಕ್ ಪರ ಆರಂಭಿಕ ಇಮಾಮ್ ಉಲ್ ಹಕ್ 78, ಮೊಹಮ್ಮದ್ ರಿಜ್ವಾನ್ ಅಜೇಯ 63 ರನ್ ಗಳಿಸಿದರು. ಇದರೊಂದಿಗೆ ಪಾಕ್ 39.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ