ಓಡಿಹೋದ ಐಸಿಸ್ ಮುಖ್ಯಸ್ಥ: ಸದ್ಯದಲ್ಲೇ ಇರಾಕಿಗೆ ಐಸಿಸ್ ಉಗ್ರರಿಂದ ಮುಕ್ತಿ

ಶುಕ್ರವಾರ, 10 ಮಾರ್ಚ್ 2017 (07:33 IST)
ಮಸೂಲ್(.10): ಇರಾಕಿನ ಬೃಹತ್ ನಗರ ಮಸೂಲ್ ಸೇರಿದಂತೆ ದೇಶದ ಹಲವು ಭಾಗಗಳನ್ನ ವಶಪಡಿಸಿಕೊಮಡಿರುವ ಸಸಿಸ್ ಭಯೋತ್ಪಾದರ ಕಪಿಮುಷ್ಠಿಯಿಂದ ಸದ್ಯದಲ್ಲೇ ಮುಕ್ತಿ ಸಿಗುವ ಸಾಧ್ಯತೆ ಇದೆ. ಇರಾಕ್ ಮಿಲಿಟರಿಯ  ದಾಳಿಗೆ ಹೆದರಿದ ಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಮಸೂಲ್`ನಿಂದ ಕಾಲ್ಕಿತ್ತಿದ್ದು, ಮರಳುಗಾಡಿನಲ್ಲಿ ಅಡಗಿಕೊಂಡಿದ್ದಾನೆ ಎಂದು ಎಎಫ್`ಪಿ ಸುದ್ದಿ ಸಂಸ್ಥೆ ತಿಳಿಸಿದೆ.


ಇರಾಕಿನ ಬೃಹತ್ ನಗರಗಳಲ್ಲೊಂದಾದ ಮಸೂಲ್ ಮರುವಶಪಡಿಸಿಕೊಳ್ಳಲು ಮಿಲಿಟರಿ ಯೋಜಿತ ಕಾರ್ಯಾಚರಣೆಗೆ ಮುಂದಾಗಿದ್ದು, ಈ ದಾಳಿ ಎದುರಿಸಲಾಗದೇ ಐಸಿಸ್ ಮುಖ್ಯಸ್ಥ ಬಾಗ್ದಾದಿ ಓಡಿಹೋಗಿದ್ದು, ಇನ್ನುಳಿದ ಐಸಿಸ್ ಕಮಾಂಡರ್`ಗಳಲ್ಲಿ ಒತ್ತಡ ಹೆಚ್ಚಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಮಸೂಲ್ ಮತ್ತೆ ಇರಾಕ್ ಸರ್ಕಾರದ ವಶಕ್ಕೆ ಸಿಗುವ ಸಾಧ್ಯತೆ ಇದೆ.

ಕಳೆದ ಅಕ್ಟೋಬರ್`ನಲ್ಲಿ ಪ್ರಧಾನಿ ಹೈದರ್ ಅಲ್ ಅಬದಿ, ಮಸೂಲ್ ನಗರವನ್ನ ಮರುವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನ ಘೋಷಿಸಿದ್ದರು. ಕಳೆದ ನವೆಂಬರ್`ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ ಬಾಗ್ದಾದಿ ನಂಬದಿರುವವರ ತಲೆ ಕಡಿದು, ಅವರ ರಕ್ತವನ್ನ ನದಿಯಂತೆ ಹರಿಸಿ ಎಂದಿದ್ದ.

ವೆಬ್ದುನಿಯಾವನ್ನು ಓದಿ