ಪಹಲ್ಗಾಮ್ ದಾಳಿ ಮಾಡಿದ್ದ ಟಿಆರ್ ಎಫ್ ಸಂಘಟನೆ ಉಗ್ರರ ಲಿಸ್ಟ್ ಗೆ

Krishnaveni K

ಶುಕ್ರವಾರ, 18 ಜುಲೈ 2025 (09:43 IST)
ನವದೆಹಲಿ: ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಟಿಆರ್ ಎಫ್ ಸಂಘಟನೆಯನ್ನು ಅಮೆರಿಕಾ ಭಯೋತ್ಪಾಕರ ಪಟ್ಟಿಗೆ ಸೇರಿಸಿದೆ. ಇದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ ಮಾಡಿದಂತಾಗಿದೆ.

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕ ಪ್ರವಾಸಿಗರ ಪ್ರಾಣ ತೆಗೆದಿದ್ದರು. ಕುಟುಂಬದವರ ಮುಂದೆಯೇ ಪುರುಷರನ್ನು ಗುಂಡಿಕ್ಕಿ ಕೊಂಡಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದ ಭಾರತ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು.

ಘಟನೆ ಬಳಿಕ ದಾಳಿಯ ಹೊಣೆಯನ್ನು ಟಿಆರ್ ಎಫ್ ಸಂಘಟನೆ ಹೊತ್ತುಕೊಂಡಿತ್ತು. ಇದೀಗ ಲಷ್ಕರ್ ಸಂಘಟನೆಯ ಅಂಗವಾಗಿರುವ ಟಿಆರ್ ಎಫ್ ಸಂಘಟನೆಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಲಾಗಿದೆ. ಭಾರತದಲ್ಲಿ ನಾಗರಿಕರ ಮೇಲೆ ನಡೆದ ದಾಳಿ ಅತ್ಯಂತ ಹೇಯ ಕೃತ್ಯವಾಗಿದೆ. ಹೀಗಾಗಿ ಟಿಆರ್ ಎಫ್ ಸಂಘಟನೆಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆ  ಪಟ್ಟಿಗೆ ಸೇರಿಸುತ್ತಿದ್ದೇವೆ ಎಂದು ಅಮರಿಕಾ ವಿದೇಶಾಂಗ ಇಲಾಖೆ ಪ್ರಕಟಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ