ಇದರಿಂದ ಸದ್ಯ ನಗರದಲ್ಲಿ ಎದುರಾಗುತ್ತಿರುವ ನೀರಿನ ಸಮಸ್ಯೆಗೆ ಕೊಂಚ ಬ್ರೇಕ್ ಸಿಗಬಹುದು. ನಗರದಲ್ಲಿ ಸದ್ಯ ಮಳೆಯ ಕೊರತೆಯಿಂದಾಗಿ ನೀರಿನ ಬಿಕ್ಕಟ್ಟು ಎದರಾಗಿದ್ದು, ನೀರಿನ ಪೂರೈಕೆಗಾಗಿ ಕೊಳವೆ ಬಾವಿಗಳು ಮತ್ತು ಕಾವೇರಿ ಜಲಾಶಯವನ್ನು ಹೆಚ್ಚು ಅವಲಂಬಿಸಿದೆ. ತಾಪಮಾನದ ಹೆಚ್ಚಳ ಮತ್ತು ಮಳೆಯಾಗದಿರುವ ಪರಿಣಾಮ ಇದೀಗ ಹಲವಾರು ಕೊಳವೆಬಾವಿಗಳು ಬತ್ತಿದ್ದು, ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 21 ರಿಂದ 23ರ ನಡುವೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗಲಿದೆ.