ಜಲ್ಲಿಕಟ್ಟು ಕ್ರೀಡೆ ಮೇಲೆ ಸುಪ್ರೀಂ ಹೇರಿದ್ದ ನಿಷೇಧವನ್ನು ಸಂಪೂರ್ಣ ತೆರವುಗೊಳಿಸಬೇಕೆಂಬ ತಮಿಳುನಾಡಿನ ಜನತೆಯ ಕ್ರಾಂತಿಕಾರಕ ಹೋರಾಟ ನಡೆಸಿತ್ತು. ಜನರನ್ನು ತಣ್ಣಗಾಗಿಸಲು ಕೇಂದ್ರದ ಮೂಲಕ ಸುಗ್ರಿವಾಜ್ಞೆ ಹೊರಡಿಸಿದ್ದ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆಗೆ ಅನುವು ಮಾಡಿಕೊಟ್ಟಿತ್ತು. ಆದರೆ ಅದಕ್ಕೆ ತೃಪ್ತರಾಗದ ಜನರು ಹೋರಾಟವನ್ನು ಮುಂದುವರೆಸಿದಾಗ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ ಜಲ್ಲಿಕಟ್ಟನ್ನು ಕಾನೂನುಬದ್ಧಗೊಳಿಸಲಾಗಿತ್ತು.