ಗೂಳಿ ಗುಟುರು: ಕ್ರಾಂತಿ ಸ್ವರೂಪ ಪಡೆದುಕೊಂಡ ಜಲ್ಲಿ ಕಟ್ಟು ಹೋರಾಟ

ಶುಕ್ರವಾರ, 20 ಜನವರಿ 2017 (09:14 IST)
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಇಂದು ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಮರೀನಾ ಸಮುದ್ರತೀರದಲ್ಲಿ ಸೇರಿರುವ ಲಕ್ಷಾಂತರ ಜನರು ನ್ಯಾಯಕ್ಕಾಗಿ ಹೋರಾಟವನ್ನು 
ಮುಂದುವರೆಸಿದ್ದಾರೆ. 

 
ಜಲ್ಲಿಕಟ್ಟು ಪರವಾಗಿ ಸುಗ್ರೀವಾಜ್ಞೆ ಹೊರಡಿಸಿ ಎಂದು ಮನವಿ ಮಾಡಿಕೊಳ್ಳಲು ನಿನ್ನೆ ಪ್ರಧಾನಿ ಅವರನ್ನು ಭೇಟಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬರಿಗೈಯಲ್ಲಿ ಹಿಂತಿರುಗಿದ ಬಳಿಕ ಆಕ್ರೋಶ ಮತ್ತಷ್ಟು ಹೆಚ್ಚಾಗಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
 
ಆಟೋ ಚಾಲಕರ ಸಂಘ, ಟಾಕ್ಸಿ ಕ್ಯಾಬ್, ಖಾಸಗಿ ಬಸ್ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದು ಇಂದು ವಾಹನಗಳನ್ನು 
ರಸ್ತೆಗಿಳಿಸುತ್ತಿಲ್ಲ. ಹಲವೆಡೆ ರೈಲ್ ರೋಖೋ ಚಳುವಳಿ ಕೂಡ ನಡೆಯುತ್ತಿದೆ. 
 
ಚಿತ್ರೋದ್ಯಮದ ಸೇರಿದಂತೆ ಎಲ್ಲ ರಂಗದವರು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ್ದು, ಇಂದು ಶೂಟಿಂಗ್ ಸೇರಿದಂತೆ ಚಿತ್ರೋದ್ಯಮ ಸಂಪೂರ್ಣ ಬಂದ್ ಆಗಿದೆ.
 
ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿರುವ ಸಿಎಂ ಸೆಲ್ವಂ, ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತಯಾರಿಸಿ ಗೃಹಖಾತೆಗೆ ಅದರ ಕರಡನ್ನು ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ಜಲ್ಲಿಕಟ್ಟಿಗೆ ಅನುಮತಿ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ಈ ಕರಡಿಗೆ ಒಪ್ಪಿಗೆ ಸಿಕ್ಕರೆ ರಾಜ್ಯಪಾಲರು ಅದಕ್ಕೆ ಸಹಿ ಮಾಡಬೇಕಾಗುತ್ತದೆ. 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ