ಜಿನ್ನಾ ಮೊದಲ ಪ್ರಧಾನಿ ಆಗುವುದು ಜವಹರಲಾಲ್ ನೆಹರೂಗೆ ಇಷ್ಟವಿರಲಿಲ್ಲವಂತೆ!
ಹೀಗಂತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಹೇಳಿದ್ದಾರೆ. ಭಾರತದ ಮೊದಲ ಪ್ರಧಾನಿಯಾಗಿ ಜಿನ್ನಾರನ್ನು ನೇಮಿಸಿದ್ದರೆ ಇಂದಿಗೂ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗುತ್ತಿರಲಿಲ್ಲ. ಆದರೆ ಜಿನ್ನಾ ಮೊದಲು ಪ್ರಧಾನಿಯಾಗುವುದು ನೆಹರೂಗೆ ಇಷ್ಟವಿರಲಿಲ್ಲ ಎಂದು ದಲೈಲಾಮಾ ಹೇಳಿದ್ದಾರೆ.
ಇದರಿಂದಾಗಿ ದೇಶ ವಿಭಜನೆಯಾಯಿತು. ದೇಶ ವಿಭಜನೆಯಾದ ಬೇಸರದಲ್ಲಿ ಗಾಂಧೀಜಿ ಕೋಲ್ಕೊತ್ತಾಗೆ ತೆರಳಿದರು. ನೆಹರೂ ಕೇವಲ ತನ್ನ ಪರವಾಗಿ ಯೋಚನೆ ಮಾಡುತ್ತಿದ್ದರು. ಕೆಲವೊಮ್ಮೆ ತಪ್ಪು ಮಾಡುತ್ತಿದ್ದರು ಎನ್ನುವ ಮೂಲಕ ದಲೈಲಾಮಾ ಹೊಸದೊಂದು ಚರ್ಚೆ ಹುಟ್ಟು ಹಾಕಿದ್ದಾರೆ.