ಜಯಲಲಿತಾ ಗರ್ಭಿಣಿಯಾಗಿದ್ದರೇ? ನ್ಯಾಯಾಲಯಕ್ಕೆ ತಮಿಳುನಾಡು ಸರ್ಕಾರ ಹೇಳಿದ್ದೇನು?
ಜಯಲಲಿತಾ ಸ್ವಂತ ಮಗಳು ನಾನು ಎಂದು ಕೋರ್ಟ್ ಮೆಟ್ಟಿಲೇರಿರುವ ಅಮೃತಾ 1980 ರ ಪ್ರಶಸ್ತಿ ಸಮಾರಂಭದ ವಿಡಿಯೋವೊಂದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅಮೃತಾ ಅದೇ ಕಾರ್ಯಕ್ರಮ ನಡೆದ ಒಂದು ತಿಂಗಳ ನಂತರ ಹುಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಆದರೆ ಈ ವಿಡಿಯೋದಲ್ಲಿ ಜಯಲಲಿತಾ ಗರ್ಭಿಣಿಯಂತೆ ತೋರುತ್ತಿಲ್ಲ. ಮಾತ್ರವಲ್ಲದೆ, ಜಯಲಲಿತಾ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಗರ್ಭಿಣಿಯಾಗಿರಲಿಲ್ಲ. ಇದೆಲ್ಲಾ ಜಯಲಲಿತಾರ ಅಪಾರ ಆಸ್ತಿ ಕಬಳಿಸಲು ಮಾಡುತ್ತಿರುವ ನಾಟಕ ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ.