ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಗರ್ಭಿಣಿಯಾಗುವುದಿಲ್ಲವೇ?

ಸೋಮವಾರ, 9 ಜುಲೈ 2018 (06:31 IST)
ಬೆಂಗಳೂರು : ಗರ್ಭಧರಿಸುವುದು ಬೇಡ ಎಂದು ನಿರ್ಧರಿಸಿರುವ ಮಹಿಳೆಯರು ಕೆಲವೊಂದು ಹಳೆಯ ತಂತ್ರಗಳ ಮೊರೆ ಹೋಗುವುದು ಸಹಜ. ಹಳೆಯ ತಂತ್ರಗಳಲ್ಲಿ ಕೆಲವು ಕೆಲಸ ಮಾಡಿದರೆ ಇನ್ನು ಕೆಲವು ಕೇವಲ ಸಲಹೆಹಷ್ಟೇ ಸೀಮಿತ. ಇದರಲ್ಲಿ ಪ್ರಮುಖವಾಗಿ ಲೈಂಗಿಕ ಕ್ರಿಯೆ ನಂತರ ಮಹಿಳೆಯರು ಮೂತ್ರ ಮಾಡಿದರೆ ಗರ್ಭ ನಿಲ್ಲುವುದಿಲ್ಲವೆಂದು ಹೇಳಲಾಗುತ್ತದೆ.


ಪ್ಲ್ಯಾನಡ್ ಪೇರೆಂಟ್ ಹುಡ್ ಪ್ರಕಾರ ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆಗೆ ತೆರಳುವುದು ಮತ್ತು ಗರ್ಭಧಾರಣೆಗೆ ಯಾವುದೇ ಸಂಬಂಧವಿಲ್ಲವೆಂದು ಅಧ್ಯಯನಗಳು ಹೇಳುತ್ತದೆ. ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೂ ನೀವು ಕೂಡ ಗರ್ಭಿಣಿಯಾಗುತ್ತಾರೆ. ಒಂದು ಸಲ ವೀರ್ಯವು ಮಹಿಳೆಯ ಯೋನಿಯೊಳಗೆ ಹೋದರೆ ಅದನ್ನು ವಾಪಸ್ ತರಲು ಸಾಧ್ಯವಿಲ್ಲ. ಮೂತ್ರವಿಸರ್ಜನೆಯಿಂದ ವೀರ್ಯವು ಹೊರಬರುವುದಿಲ್ಲ ಮತ್ತು ಗರ್ಭಧಾರಣೆ ಸಾಧ್ಯತೆ ಕಡಿಮೆ ಮಾಡಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ