ಹಿಂದೂ ಎಂದು ನಂಬಿಸಿ ಯುವತಿಯ ಗರ್ಭಿಣಿ ಮಾಡಿದ ಅನ್ಯಕೋಮಿನ ಯುವಕ
ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಈ ಘಟನೆ ನಡೆದಿದೆ. ತೌಫೀಕ್ ಎಂಬಾತ ಬಂಧಿತ. ಈತ ಸುರೇಶ್ ಎಂದು ಹಿಂದೂ ಹೆಸರು ಹೇಳಿಕೊಂಡು ಯುವತಿಯನ್ನು ನಂಬಿಸಿ ವಂಚನೆ ಮಾಡಿದ್ದಾನೆ. ತನ್ನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಫೋನ್ ನಂಬರ್ ಪಡೆದು ಕರೆ ಮಾಡಿ ಸ್ನೇಹ ಸಂಪಾದಿಸಿದ್ದ.
ಆತನ ಮಾತು ನಂಬಿ ಹಿಂದೆ ಹೋದ ಯುವತಿ ಸರ್ವಸ್ವನ್ನೂ ಅರ್ಪಿಸಿದ್ದಳು. ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ. ಈಗ ಆಕೆಗೆ ಆರೋಪಿಯ ನಿಜ ರೂಪ ಗೊತ್ತಾಗಿದೆ. ಆರೋಪಿ ತೌಫೀಕ್ ಗೆ ಮದುವೆಯಾಗಿ ಮಕ್ಕಳೂ ಇದ್ದಾರೆ ಎಂದು ತಿಳಿದ ಯುವತಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಯಾರೋ ಆಕೆಯನ್ನು ರಕ್ಷಿಸಿದ್ದಾರೆ.
ಇದೀಗ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದು ಲವ್ ಜಿಹಾದ್ ಪ್ರಕರಣವಿರಬಹುದು ಎಂದು ಅನುಮಾನಿಸಲಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.