ಪಂಜಾಬ್‌ನಲ್ಲಿ ಅಕಾಲಿಕ ಆಲಿಕಲ್ಲು ಮಳೆ: ಗೋಧಿ ಬೆಳೆಗೆ ಹಾನಿ, ನಷ್ಟದ ಭೀತಿಯಲ್ಲಿ ರೈತರು

Sampriya

ಶನಿವಾರ, 30 ಮಾರ್ಚ್ 2024 (18:01 IST)
Photo Courtesy X
ಚಂಡೀಗಢ: ಪಂಜಾಬ್‌ನ ಹಲವೆಡೆ ಇಂದು ಗಾಳಿ ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ.  ಅಕಾಲಿಕ ಮಳೆಯಿಂದ ಗೋಧಿ ಬೆಳೆಗೆ ಹಾನಿಯಾಗಿದ್ದು, ನಷ್ಟದ ಭೀತಿಯನ್ನು ಅಲ್ಲಿನ ರೈತರು ವ್ಯಕ್ತಪಡಿಸಿದ್ದಾರೆ.

ಬಟಿಂಡಾ, ಫಾಜಿಲ್ಕಾ, ಲೂಧಿಯಾನ, ಪಟಿಯಾಲ, ಅಮೃತಸರ ಮತ್ತು ಪಠಾಣ್‌ಕೋಟ್ ಸೇರಿದಂತೆ ಪಂಜಾಬ್‌ನ ಹಲವಾರು ಭಾಗಗಳಲ್ಲಿ ಇಂದು ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ.ಕೆಲವು ಸ್ಥಳಗಳಲ್ಲಿ ಬಲವಾದ ಗಾಳಿ ಮತ್ತು ಆಲಿಕಲ್ಲು ಮಳೆಯೊಂದಿಗೆ ಮಳೆ ಸುರಿದಿದೆ.

ಇದೀಗ ಗೋಧಿ ಬೆಳೆ ಕಟಾವಿಗೆ ಸಿದ್ಧವಾಗಿದ್ದು, ಇಂತಹ ಸಮಯದಲ್ಲಿ ಜೋರಾದ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಏಪ್ರಿಲ್ 1ರ ನಂತರ ಗೋಧಿ ಕಟಾವು ಆರಂಭಗೊಳ್ಳುತ್ತದೆ.

ಇದೀಗ ಸುರಿದ ಮಳೆಯಿಂದಾಗಿ ಕಟಾವುಗೆ ಸಿದ್ಧವಾಗಿರುವ ಗೋಧಿ ಬೆಳೆಗೆ ಹಾನಿಯಾಗಿದ್ದು, ನಷ್ಟದ ಭೀತಿಯನ್ನು ರೈತರು ಎದುರಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ