ರಾಹುಲ್ ಗಾಂಧಿಗೆ ಜೆ.ಪಿ.ನಡ್ಡಾ ಹಾಕಿದ ಸವಾಲೇನು ಗೊತ್ತೇ?

ಸೋಮವಾರ, 23 ಡಿಸೆಂಬರ್ 2019 (06:57 IST)
ನವದೆಹಲಿ : ಪೌರತ್ವ ಕಾಯ್ದೆ ವಿರೋಧಿಸುವ ರಾಹುಲ್ ಗಾಂಧಿ ಅದರ ಬಗ್ಗೆ 10 ಸಾಲುಗಳನ್ನು ಮಾತನಾಡಿ, ದೇಶದ ಜನರಿಗೆ ನೋವುಂಟು ಮಾಡುವ 2 ಸಾಲುಗಳನ್ನು ತೋರಿಸಲಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ  ಸವಾಲು ಹಾಕಿದ್ದಾರೆ.



ಇಂದೋರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಯುವಕರಿಗೆ ಪ್ರಚೋದನೆ ನೀಡುವ ಮೂಲಕ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ. ಇಷ್ಟೆಲ್ಲಾ ಮಾತನಾಡುವ ಅವರು ಪೌರತ್ವ ತಿದ್ದಪಡಿ ಕಾಯ್ದೆ ಕುರಿತು 10 ಸಾಲುಗಳನ್ನು ಮಾತನಾಡಲಿ, ಇದರಲ್ಲಿ ದೇಶದ ಜನರಿಗೆ ನೋವುಂಟು ಮಾಡುವ 2 ಸಾಲುಗಳನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.


ಅಲ್ಲದೇ ದೇಶವನ್ನು ಮುನ್ನಡೆಸಲು ಬಂದ ಜನ ಕನಿಷ್ಠ ಅಂಶಗಳ ಕುರಿತು ಸಹ ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ