ನ್ಯಾಯಮೂರ್ತಿಗಳ ನೇಮಕಾತಿ ಪ್ರಸ್ತಾವ ಶೀಘ್ರ ಇತ್ಯರ್ಥದ ಭರವಸೆ ಸಿಕ್ಕಿದೆ:ಸಿಜೆಐ

ಭಾನುವಾರ, 3 ಅಕ್ಟೋಬರ್ 2021 (15:19 IST)
ನವದೆಹಲಿ : ಎಂಟು ಮಂದಿ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಬಾಕಿ ಇರುವ ಶಿಫಾರಸುಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಇತ್ಯರ್ಥಗೊಳಿಸುವುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಭರವಸೆ ನೀಡಿರುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶನಿವಾರ ಹೇಳಿದ್ದಾರೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್ಎಎಲ್ಎಸ್ಎ) ಹಮ್ಮಿಕೊಂಡಿರುವ ಆರು ವಾರಗಳ 'ಪ್ಯಾನ್ ಇಂಡಿಯಾ ಕಾನೂನು ಅರಿವು ಮತ್ತು ಔಟ್ರೀಚ್ ಅಭಿಯಾನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
'ಮೇ ತಿಂಗಳಿನಿಂದ ನಾವು 106ಕ್ಕೂ ಹೆಚ್ಚು ನ್ಯಾಯಾಧೀಶರನ್ನು ವಿವಿಧ ಹೈಕೋರ್ಟ್ಗಳಿಗೆ ಮತ್ತು ಒಂಬತ್ತು ಮುಖ್ಯ ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್ಗಳಿಗೆ ನೇಮಕ ಮಾಡಲು ಶಿಫಾರಸು ಮಾಡಿದ್ದೇವೆ. ಸರ್ಕಾರವು ಈವರೆಗೆ 106 ನ್ಯಾಯಾಧೀಶರ ಪೈಕಿ ಏಳು ಮತ್ತು 9 ಮುಖ್ಯ ನ್ಯಾಯಮೂರ್ತಿಗಳ ಪೈಕಿ ಒಬ್ಬರ ಶಿಫಾರಸು ಇತ್ಯರ್ಥಗೊಳಿಸಿದೆ' ಎಂದು ಅವರು ಹೇಳಿದರು.
'ಉಳಿದ ಹೆಸರುಗಳನ್ನು ಸರ್ಕಾರವು ಶೀಘ್ರದಲ್ಲೇ ಇತ್ಯರ್ಥಗೊಳಿಸಲಿದೆಂದು ನಾನು ನಿರೀಕ್ಷಿಸಿರುವೆ' ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ