ಕರ್ನಾಟಕದ ಜಾನಪದ ಕ್ರೀಡೆ ಕಂಬಳಕ್ಕೆ ಇನ್ಯಾರೂ ತಗಾದೆ ತೆಗೆಯುವಂತಿಲ್ಲ!
ಪ್ರಾಣಿ ದಯಾ ಸಂಘ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ಹಿಂಸೆ ನೆಪದಲ್ಲಿ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ತಡೆ ಒಡ್ಡಬೇಕೆಂದು ಅರ್ಜಿ ಸಲ್ಲಿಸಿತ್ತು.
ಇದೀಗ ಕಂಬಳ ಸೇರಿದಂತೆ ಕೆಲವು ಜಾನಪದ ಕ್ರೀಡೆಗಳಿಗೆ ಕಾನೂನಿನ ಮಾನ್ಯತೆ ನೀಡುವ ಮಸೂದೆಯನ್ನು ರಾಷ್ಟ್ರಪತಿಗಳ ಮುದ್ರೆಗೆ ನೀಡಲಾಗಿತ್ತು. ಅದಕ್ಕೀಗ ರಾಷ್ಟ್ರಪತಿಗಳಿಂದಲೂ ಮುದ್ರೆ ಸಿಕ್ಕಿದೆ. ಹೀಗಾಗಿ ಪೇಟಾ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.