ತನಗೆ ಅಗೌರವ ತೋರಿದ ಬಿಎಸ್ಎಫ್ ಯೋಧನಿಗೆ ಶಿಕ್ಷೆ ನೀಡದಿರಲು ಪ್ರಧಾನಿ ಮೋದಿ ಮನವಿ

ಗುರುವಾರ, 8 ಮಾರ್ಚ್ 2018 (11:24 IST)
ನವದೆಹಲಿ: ಕಾರ್ಯಕ್ರಮವೊಂದರ ಬಗ್ಗೆ ವರದಿ ಮಾಡುವಾಗ ತನ್ನ ಹೆಸರು ಪ್ರಸ್ತಾಪಿಸದೇ ಶಿಸ್ತು ಕ್ರಮಕ್ಕೊಳಗಾಗಬೇಕಿದ್ದ ಬಿಎಸ್ಎಫ್ ಯೋಧನ ರಕ್ಷಣೆಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಪ.ಬಂಗಾಲದ 15 ನೇ ಬೆಟಾಲಿಯನ್ ಬಿಎಸ್ಎಫ್ ಯೋಧ ಸಂಜೀವ್ ಕುಮಾರ್ ಎಂಬಾತ ತನ್ನ ಮೇಲಧಿಕಾರಿಗಳಿಗೆ ಪ್ರಧಾನಿ ಭಾಗವಹಿಸಿದ್ದ ಕಾರ್ಯಕ್ರಮದ ಬಗ್ಗೆ ವರದಿ ಮಾಡುವಾ ‘ಪ್ರಧಾನಿ ಶ್ರೀ ನರೇಂದ್ರ ಮೋದಿ’ ಎಂದು ಪ್ರಸ್ತಾಪಿಸಲಿಲ್ಲ.

ಇದೇ ಕಾರಣಕ್ಕೆ ಯೋಧನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದ ಮೇಲಧಿಕಾರಿಗಳು ಒಂದು ವಾರದ ವೇತನ ಕಡಿತಗೊಳಿಸುವ ಶಿಕ್ಷೆಗೆ ಮುಂದಾಗಿದ್ದರು. ಇದರ ಬಗ್ಗೆ ತಿಳಿಯಯುತ್ತಲೇ ಬಿಎಸ್ಎಫ್ ಗೆ ಪತ್ರ ಬರೆದ ಪ್ರಧಾನಿ ಮೋದಿ, ಯೋಧರು ತಮ್ಮ ಪ್ರಾಣದ ಹಂಗು ತೊರೆದು ಗಡಿ ಕಾಯುತ್ತಾರೆ. ಅವರಿಗೆ ವೇತನ ಕಡಿತ ಮಾಡುವ ಶಿಕ್ಷೆ ನೀಡವುದು ಸರಿಯಲ್ಲ.  ಮೇಲಧಿಕಾರಿಗಳು ತಪ್ಪಿನ ಅರಿವು ಮೂಡಿಸುವ ಶಿಸ್ತು ಬೋಧಿಸಬೇಕು ಎಂದು ಪ್ರಧಾನಿ ಪತ್ರೆ ಬರೆದಿದ್ದಾರೆ. ಅದರಂತೆ ಇದೀಗ ಯೋಧನಿಗೆ ನೀಡಲಾಗಿದ್ದ ಶಿಕ್ಷೆ ಹಿಂಪಡೆಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ