ಕಾನ್ಪುರ ರೈಲು ಅಪಘಾತದ ಹಿಂದೆ ಪಾಕ್ ಕೈವಾಡ

ಬುಧವಾರ, 18 ಜನವರಿ 2017 (10:07 IST)
ಉಗ್ರರನ್ನು ಪ್ರಚೋದಿಸುವ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ, ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸುವ ಪಾಕಿಸ್ತಾನ ಮತ್ತೀಗ ಹೊಸ ಮಾರ್ಗದ ಮೂಲಕ ಭಾರತದ ವಿರುದ್ಧ ಪಾಕ್ ಪ್ರತೀಕಾರ ತೀರಿಸಿಕೊಳ್ಳಲು ಆರಂಭಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೌದು, ಕಾನ್ಪುರ ರೈಲು ಅಪಘಾತದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ ವರ್ಷ ನವೆಂಬರ್ 20ರಂದು 140 ಮಂದಿ ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಕಾನ್ಪುರ ರೈಲು ದುರಂತದಲ್ಲಿ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಕೈವಾಡವಿದೆ ಎಂದು ಬಿಹಾರ ಪೊಲೀಸರು  ಹೇಳುತ್ತಿದ್ದಾರೆ.
 
ಘಟನಾ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು ದೊರಕಿದ್ದು ಇವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವು ಸುಧಾರಿತ ಸ್ಪೋಟಕಗಳು ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ಘಟನೆಗೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಬಂಧಿಸಲಾಗಿದ್ದು ಅವರು ಸಹ ಪಾಕ್ ಕೈವಾಡವನ್ನು ಒಪ್ಪಿಕೊಂಡಿದ್ದಾರೆ. ಐಎಸ್ಐ ಏಜೆಂಟ್‌ಗಳು ಭಾರಿ ಮೊತ್ತದ ಹಣ ನೀಡಿ ರೈಲು ಹಳಿಯಲ್ಲಿ ಪ್ರಬಲ ಸ್ಪೋಟಕ ವಸ್ತುಗಳನ್ನು ಇರಿಸುವಂತೆ ಹೇಳಿದ್ದರು ಎಂದು ಬಂಧಿತರು ಬಾಯ್ಬಿಟ್ಟಿದ್ದಾರೆ. 
 
ಉತ್ತರಪ್ರದೇಶದ ಕಾನ್ಪುರದ ಪುರ್ಖಾರಾಯಂ ನವೆಂಬರ್ 20 ರಂದು ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ