ಖಾಸಗಿ ವಾಹನಗಳಿಗೆ ಟೋಲ್: ಗುಡ್ ನ್ಯೂಸ್ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Krishnaveni K

ಗುರುವಾರ, 16 ಜನವರಿ 2025 (09:52 IST)
ನವದೆಹಲಿ: ಖಾಸಗಿ ವಾಹನಗಳಿಗೆ ಟೋಲ್ ವಿಧಿಸುವ ವಿಚಾರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಾರ್ವಜನಿಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೇನು ಇಲ್ಲಿದೆ ವಿವರ.

ಖಾಸಗಿ ವಾಹನಗಳಿಗೆ ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಗಳಲ್ಲಿ ಟೋಲ್ ಪಾವತಿಗೆ ಕ್ಯೂ ನಿಲ್ಲಬೇಕಿಲ್ಲ. ಬದಲಾಗಿ ಖಾಸಗಿ ವಾಹನಗಳಿಗೆ ಇನ್ನು ಮಾಸಿಕ ಪಾಸ್ ಅಥವಾ ವಾರ್ಷಿಕ ಪಾಸ್ ಮಾಡಿಸುವ ನಿಯಮ ಜಾರಿಗೆ ತರುವುದಾಗಿ ಸಚಿವರು ಹೇಳಿದ್ದಾರೆ.

ಖಾಸಗಿ ವಾಹನಗಳಿಂದ ಶೇ.26 ರಷ್ಟು ಟೋಲ್ ಸಂಗ್ರಹವಾಗುತ್ತಿದೆ. ವಾಣಿಜ್ಯ ವಾಹನಗಳಿಂದ ಶೆ.74 ರಷ್ಟು ಟೋಲ್ ಸಂಗ್ರಹವಾಗುತ್ತಿದೆ. ಖಾಸಗಿ ವಾಹನಗಳಿಗೆ ಮಾಸಿಕ ಅಥವಾ ವಾರ್ಷಿಕ ಪಾಸ್ ನೀಡುವುದರಿಂದ ಯಾವುದೇ ನಷ್ಟವಾಗದು ಎಂದು ಸಚಿವರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (ಜಿಎನ್ಎಸ್ಎಸ್) ಆಧಾರಿತ ಟೋಲ್ ವ್ಯವಸ್ಥೆಯನ್ನು ಫಾಸ್ಟ್ ಟ್ಯಾಗ್ ಜೊತೆಗೆ ಹೆಚ್ಚುವರಿ ಸೇವೆಯಾಗಿ ಜಾರಿಗೆ ತರಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ