ಪಿಡಿಪಿ ಸದಸ್ಯರ ಮನೆ ಅಗ್ನಿಗಾಹುತಿ: ಕಾಶ್ಮೀರದಲ್ಲಿ ಮತ್ತೆ ಅಶಾಂತಿ

ಗುರುವಾರ, 1 ಸೆಪ್ಟಂಬರ್ 2016 (18:32 IST)
ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಪಿಡಿಪಿ ರಾಜ್ಯಸಭೆ ಸದಸ್ಯ ನಾಜಿರ್ ಲಾವೇ ಅವರ ಮನೆಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿದ ಘಟನೆ ಸಂಭವಿಸಿದೆ. ಸಮೀಪದ ಕಾತ್ರುಸು ಗ್ರಾಮದಲ್ಲಿ ಭದ್ರತಾಪಡೆಗಳು ಸರ್ಕಾರಿ ವಿರೋಧಿ ಘೋಷಣೆಗಳನ್ನು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನೆಕಾರರತ್ತ ಗೋಲಿ ಗುಂಡುಗಳನ್ನು ಸಿಡಿಸಿದ ಕೆಲವು ಗಂಟೆಗಳ ಬಳಿಕ ಈ ಘಟನೆ ಸಂಭವಿಸಿದೆ.
 
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ, ಪರಿಸ್ಥಿತಿ ಸುಧಾರಿಸುವುದಕ್ಕೆ ಬದಲಾಗಿ ವಿಕೋಪಕ್ಕೆ ತಿರುಗಿದೆ ಎಂದು ಹೇಳಿದ್ದಾರೆ.
 
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರಾನ್ ವಾನಿ ಹತ್ಯೆ ಬಳಿಕ ಕಣಿವೆಯಲ್ಲಿ ಸ್ಫೋಟಕ ಸ್ಥಿತಿ ನೆಲೆಸಿದ್ದು, ಕಳೆದೆರಡು ದಿನಗಳಿಂದ ಶಾಂತಿ ನೆಲೆಸಿತ್ತು. ಆದರೆ ಹಿಂಸಾತ್ಮಕ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ.

ವೆಬ್ದುನಿಯಾವನ್ನು ಓದಿ