ತಿರುವನಂತಪುರಂ: ಪಠ್ಯ ಪುಸ್ತಕದಲ್ಲಿ ಕೆಲವೊಂದು ತಪ್ಪುಗಳು, ಉದ್ದೇಶಪೂರ್ವಕವಾಗಿ ನಡೆಯುತ್ತದೋ ಇಲ್ಲವೇ ಉದ್ದೇಶಪೂರ್ವಕವಾಗಿರದೇ ಅನಿರೀಕ್ಷಿತವಾಗಿ ನಡೆಯುತ್ತದೋ ಗೊತ್ತಿಲ್ಲ. ಆದರೆ ಹಲವು ಬಾರಿ ಪಠ್ಯ ಪುಸ್ತಕಗಳಲ್ಲಿ ನೀಡುವ ಕೆಲವೊಂದು ವಿಚಾರಗಳು ವಿವಾದಕ್ಕೆ ಕಾರಣವಾಗುವುದು ಇದೆ.
ಇದೀಗ ಕೇರಳದ ಇಂಗ್ಲಿಷ್ ಭಾಷೆಯ ಪಠ್ಯ ಪುಸ್ತಕದಲ್ಲಿ ನೀಡಲಾಗಿರುವ ಕೆಲವೊಂದು ಚಿತ್ರಗಳು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಜೊತೆಗೆ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಎರಡು ಸಿಹಿ ತಿಂಡಿ ಮಾರುವವ ಚಿತ್ರ ನೀಡಲಾಗಿದೆ. ಈ ಪೈಕಿ ಹಿಂದೂ ಹೆಸರಿರುವ ವ್ಯಕ್ತಿಯ ಅಂಗಡಿ ಸಿಹಿ ತಿನಿಸುಗಳು ನೊಣ ಮುತ್ತಿಕೊಂಡು ಶುಚಿಯಾಗಿಲ್ಲ ಎಂದು ತೋರಿಸಲಾಗಿದೆ. ಮುಸ್ಲಿಂ ವ್ಯಕ್ತಿಯ ಹೆಸರಿರುವ ಚಿತ್ರದಲ್ಲಿ ಸಿಹಿ ತಿಂಡಿಗಳು ಒಪ್ಪವಾಗಿ ಜೋಡಿಸಿರುವುದಲ್ಲದೆ, ಶುಚಿಯಾಗಿರುವಂತೆ ತೋರಿಸಲಾಗಿದೆ.
ಅದೇ ರೀತಿ ಇನ್ನೊಂದು ಪುಟದಲ್ಲಿ ಹಿಂದೂ ವ್ಯಕ್ತಿಯ ಹೆಸರು ಹಾಕಿ ಆತ ಶುಚಿಯಾಗಿಲ್ಲ. ಮುಸ್ಲಿಂ ವ್ಯಕ್ತಿಯ ಹೆಸರು ಹಾಕಿ ಆತ ಶುಚಿಯಾಗಿರುತ್ತಾನೆ ಎಂದು ವಿವರಿಸಲಾಗಿದೆ. ಈ ಎರಡೂ ಚಿತ್ರಗಳು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಶುಚಿಯಾಗಿಲ್ಲದಿರುವ ಹೆಸರು ಹಿಂದೂಗಳದ್ದೇ ಯಾಕೆ ಆಗಿರಬೇಕು. ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಈ ರೀತಿ ಹಿಂದೂಗಳ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೇ ಕಾರಣಕ್ಕೆ ಕೇರಳ ಲವ್ ಜಿಹಾದ್ ಪ್ರಕರಣದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.