ಭಾವೀ ಪತಿಯೊಂದಿಗೆ ಸಮವಸ್ತ್ರದಲ್ಲಿ ಫೋಟೋ ಶೂಟ್ ಮಾಡಿ ಪೊಲೀಸ್ ಅಧಿಕಾರಿ ಎಡವಟ್ಟು
ಕೋಝಿಕ್ಕೋಡ್ ನ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಮದುವೆ ಫೋಟೋ ಶೂಟ್ ಮಾಡಿಸಿಕೊಳ್ಳುವಾಗ ಪೊಲೀಸ್ ಸಮವಸ್ತ್ರದಲ್ಲೇ ಪೋಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದು ನಿಯಮಗಳಿಗೆ ವಿರುದ್ಧವಾಗಿದೆ. 2015 ರಲ್ಲೇ ಅಂದಿನ ಡಿಜಿಪಿ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವಂತಿಲ್ಲ ಎಂದು ನಿಯಮ ರೂಪಿಸಿದ್ದರು. ಇದೀಗ ನಿಯಮ ಉಲ್ಲಂಘಿಸಿದ ತಪ್ಪಿಗೆ ಮಹಿಳಾ ಅಧಿಕಾರಿ ಶಿಕ್ಷೆಗೆ ಗುರಿಯಾಗಬೇಕಾಗಿದೆ.