ಈಕೆಗೆ 11 ಬಾರಿ ಮದುವೆಯಾದರೂ ತೃಪ್ತಿಯಾಗಿಲ್ವಂತೆ!
ಅಮೆರಿಕಾದ ಖ್ಯಾತ ಇಂಟೀರಿಯರ್ ಡಿಸೈನರ್ ಆಗಿರುವ ಮೊನೆಟ್ ಡಯಾಸ್ ಎಂಬಾಕೆ 11 ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ಇದೀಗ 12 ನೇ ಬಾರಿಗೆ ಮದುವೆಯಾಗಲು ವರನ ಹುಡುಕಾಟದಲ್ಲಿದ್ದಾಳಂತೆ.
ಈಕೆಗೆ ಮದುವೆಯಾಗುವುದೇ ಒಂದು ಹವ್ಯಾಸವಾಗಿಬಿಟ್ಟಿದೆ. ಹೆಚ್ಚೆಂದರೆ 2 ತಿಂಗಳು ಜೊತೆಗಿದ್ದ ಸೋಡಾ ಚೀಟಿ ಕೊಡುತ್ತಾಳಂತೆ. ಕಳೆದ ಮದುವೆ ಅಂದರೆ 11 ನೇ ಗಂಡನ ಜೊತೆಯಲ್ಲಿ ಮಾತ್ರ 10 ವರ್ಷ ಸಂಸಾರ ಮಾಡಿದ್ದಾಳಂತೆ. ಈಕೆಯ ಮದುವೆ ಸುದ್ದಿ ಈಗ ವೈರಲ್ ಆಗಿದೆ.