ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದ ‌ಕಿರುತೆರೆ ನಟಿ ಶಿವಾಂಗಿ ಜೋಶಿ

Sampriya

ಭಾನುವಾರ, 9 ಫೆಬ್ರವರಿ 2025 (20:00 IST)
Photo Courtesy X
ಪ್ರಯಾಗರಾಜ್: ಜನಪ್ರಿಯ ಕಿರುತೆರೆ ನಟಿ ಶಿವಾಂಗಿ ಜೋಶಿ ಅವರು ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ 2025 ಗೆ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿದರು.

ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಯ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಕುಂಭಸ್ನಾನ ಮಾಡಿದರು.

ಆಧ್ಯಾತ್ಮಿಕ ಕ್ಷಣಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.  ಅವರ ಪೋಸ್ಟ್‌ಗಳಲ್ಲಿ, ನಟಿ ಪವಿತ್ರ ಸ್ನಾನ ಮಾಡುವುದನ್ನು, ಪುರೋಹಿತರಿಂದ ಆಶೀರ್ವಾದ ಪಡೆಯುವುದು ಮತ್ತು ಉತ್ಸವದಲ್ಲಿ ಆರತಿಗೆ ಸಾಕ್ಷಿಯಾಗುವುದನ್ನು ಕಾಣಬಹುದು. ಪ್ರಯಾಗರಾಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಕೆ ತನ್ನ ಶಾಸ್ತ್ರೀಯ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುತ್ತಿರುವುದನ್ನು ಒಂದು ವಿಡಿಯೋ ತೋರಿಸಿದೆ.

ಶನಿವಾರ ಮುಂಜಾನೆ 'ಮಿರ್ಜಾಪುರ' ನಟ ಪಂಕಜ್ ತ್ರಿಪಾಠಿ ಅವರು ತಮ್ಮ ಕುಟುಂಬದೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ