ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕ!
ಕಿಲ್ಪಾಕ್ ಶಾಲೆಯ 12 ವರ್ಷದ ಬಾಲಕ ಪರೀಕ್ಷೆಗೆ ಹೋಗುವುದಿಲ್ಲ ಎಂದು ತನ್ನ ಪೋಷಕರಿಗೆ ಮನವಿ ಮಾಡಿದ್ದ. ಆದರೆ ಆತನ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ನಾಟಕವನ್ನು ಆಡಿದ್ದಾನೆ.
ಘಟನೆಗೆ ಸಂಬಂಧಿಸಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಆ ಬಾಲಕ ತಾನಾಗೇ ಮನೆಗೆ ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದ್ದಾರೆ.