ಆಸ್ತಿಗಾಗಿ ತಮ್ಮ ಮಕ್ಕಳ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಗಂಡು ಮಕ್ಕಳು
ಬುಧವಾರ, 11 ನವೆಂಬರ್ 2020 (06:18 IST)
ಮಧುರೈ : ಆಸ್ತಿ ಹಂಚಿಕೆ ಮಾಡುವ ವಿಚಾರಕ್ಕೆ ಮಹಿಳೆಯನ್ನು ಆಕೆಯ ಗಂಡು ಮಕ್ಕಳು ಮತ್ತು ಮೊಮ್ಮಕ್ಕಳು ಹೊಡೆದು ಕೊಂದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಮೃತ ಮಹಿಳೆಗೆ ನಾಲ್ವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳು ಪತಿಯನ್ನು ಕಳೆದುಕೊಂಡು ತಾಯಿಯ ಜೊತೆಯಲ್ಲಿಯೇ ಇದ್ದಾರೆ. ನಾಲ್ವರು ಗಂಡುಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇವರಿಗೆ 2,75 ಎಕರೆ ಆಸ್ತಿ ಇದೆ. ಈ ಹಿನ್ನಲೆಯಲ್ಲಿ ಇಬ್ಬರು ಗಂಡು ಮಕ್ಕಳು ಆಸ್ತಿಯನ್ನು ತಮ್ಮಿಬ್ಬರಿಗೆ ಹಂಚಿ ಅವರಿಗೆ ಹಣ ನೀಡುವುದಾಗಿ ತಾಯಿಗೆ ಹೇಳಿದ್ದಾರೆ. ಆದರೆ ತಾಯಿ ಆಸ್ತಿ ಎಲ್ಲರಿಗೂ ಸಮಾನವಾಗಿ ಹಂಚುವುದಾಗಿ ತಿಳಿಸಿದ್ದಾಳೆ.
ಇದರಿಂದ ಕೋಪಗೊಂಡ ಗಂಡು ಮಕ್ಕಳು ಮತ್ತು ಮೊಮ್ಮಕ್ಕಳು ಮಹಿಳೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಮೃತಳ ಮಗಳು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದವರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.