ಪತ್ನಿಯ ಸ್ವೇಚ್ಚಾಚಾರಕ್ಕೆ ಬೇಸತ್ತ ಪತಿಯಿಂದ ಹತ್ಯೆ

ಸೋಮವಾರ, 13 ನವೆಂಬರ್ 2023 (13:35 IST)
ಪತ್ನಿಗೆ ಎಷ್ಟು ಬುದ್ಧಿವಾದ ಹೇಳಿದ್ದರೂ ಅವಳು ಜೀನ್ಸ್ ಮತ್ತು ಟಿ ಶರ್ಟ್ ಧರಿಸುವುದನ್ನು ಬಿಟ್ಟಿರಲಿಲ್ಲ. ಇದರಿಂದ ಪತ್ನಿ ಪೂಜಾ ಜತೆ ಜೀನ್ಸ್ ಪ್ಯಾಂಟ್ ವಿಷಯಕ್ಕೆ ಸಂಬಂಧಿಸಿದಂತೆ  ಪದೇ ಪದೇ ವಾದವಿವಾದಕ್ಕೆ ಆರೋಪಿ ಇಳಿಯುತ್ತಿದ್ದ. ರಂಜಿತ್ ನಿಷಾದ್ ಎಂದು ಗುರುತಿಸಲಾದ 24 ವರ್ಷದ ವ್ಯಕ್ತಿ ಕೊಲೆ ಆರೋಪಿಯಾಗಿದ್ದು ಈಗ ತಪ್ಪಿಸಿಕೊಂಡಿದ್ದಾನೆ.
 
ತಾನು ವಿಧಿಸಿದ್ದ ವಸ್ತ್ರ ಸಂಹಿತೆ ಉಲ್ಲಂಘಿಸಿದ್ದಾಳೆಂಬ ಕಾರಣದ ಮೇಲೆ 21 ವರ್ಷದ ಮಹಿಳೆಯನ್ನು ಅವಳ ಪತಿಯೇ ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಪುಣೆಯಲ್ಲಿ ಸಂಭವಿಸಿದೆ.
 
ಕೆಲವು ದಿನಗಳ ಹಿಂದೆ ಇದೇ ಕಾರಣಕ್ಕೆ ಸಿಟ್ಟಿಗೆಟ್ಟ ಆರೋಪಿ ಪತ್ನಿಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಎಂದು ನೆರೆಮನೆಯವರ ಹೇಳಿಕೆಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.   ನೆರೆಮನೆವರಿಗೆ ಪಕ್ಕದ ಮನೆಯಿಂದ ಕೊಳೆತ ಶವದ ವಾಸನೆ ಬಂದಾಗ ಮಹಿಳೆಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ