ಕರೆಂಟ್ ಬಿಲ್ ನೋಡಿ ಆಸ್ಪತ್ರೆಗೆ ದಾಖಲು!

ಸೋಮವಾರ, 1 ಜೂನ್ 2015 (10:36 IST)
ಪುಟ್ಟ ಕಿರಾಣಿ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದ ಕೃಷ್ಣ ಪ್ರಸಾದ್ ಅವರ ಕುಟುಂಬ ಪ್ರತಿ ತಿಂಗಳಿನಂತೆ ಈ ಬಾರಿಯೂ ಬಂದ ವಿದ್ಯುತ್ ಬಿಲ್‌ನ್ನು ತೆರೆದು ನೋಡಲಾಗಿ ಶಾಕ್‌ಗೆ ಒಳಗಾಗಿ ಬಿಟ್ಟಿತು. ಅವರಿಗೆ ಬಂದಿದ್ದು ಬರೊಬ್ಬರಿ  55 ಕೋಟಿ ಕರೆಂಟ್ ಬಿಲ್. ಈ ಬಿಲ್ ನೋಡಿ ಬಿಪಿ ಏರಿಸಿಕೊಂಡ ಪ್ರಸಾದ್  ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 
 
ಇದು ನಡೆದಿರುವುದು ರಾಂಚಿಯ ಕದ್ರುವಿನಲ್ಲಿ. ಕಿರಾಣಿ ಅಂಗಡಿ ಮಾಲೀಕ ಕೃಷ್ಣಪ್ರಸಾದ್‌ ಸಹೋದರ ಜಿತೇಂದ್ರ ಹೇಳುವ ಪ್ರಕಾರ  "ನಾವು  2 ಬೆಡ್‌ ರೂಮ್‌ನ ಮನೆಯಲ್ಲಿ ವಾಸವಾಗಿದ್ದೇವೆ 1 ಫ್ರಿಡ್ಜ್, 2 ಎಸಿ, 3 ಫ್ಯಾನ್‌ ಹೀಗೆ ಕೆಲ ವಿದ್ಯುತ್ ಚಾಲಿತ ಗೃಹಬಳಕೆ ವಸ್ತುಗಳು ನಮ್ಮ ಮನೆಯಲ್ಲಿವೆ. ಪ್ರತಿ ತಿಂಗಳು ಸಾಮಾನ್ಯವಾಗಿ ನಾವು 8,00ರೂಪಾಯಿ ವಿದ್ಯುತ್ ಬಿಲ್‌ನ್ನು ಪಡೆಯುತ್ತಿದ್ದೆವು. ಆದರೆ ಕಳೆದ 3 ತಿಂಗಳಿಂದ ನಮಗೆ ವಿದ್ಯುತ್ ಬಿಲ್ ಬಂದಿರಲಿಲ್ಲ. ಆದರೆ, 3 ತಿಂಗಳ ನಂತರ  ಕಳೆದ ಶನಿವಾರ ಬಂದ ವಿದ್ಯುತ್‌ ಬಿಲ್‌ ನೋಡಿ ನಮಗೆ ಆಘಾತವಾಯಿತು. ನಮ್ಮ ತಾಯಿ ಅಧಿಕ ರಕ್ತದೊತ್ತಡಕ್ಕೆ ಒಳಗಾದರು. ಕಾರಣ ನಮಗೆ ಬಂದಿದ್ದು 55,49,88,036 ರೂಪಾಯಿ ಕರೆಂಟ್ ಬಿಲ್",.
 
ವಿದ್ಯುತ್‌ ಮಂಡಳಿ ಸಿಬ್ಬಂದಿ ಉದಾಸೀನದಿಂದ ತಮ್ಮ ತಾಯಿ ಆಸ್ಪತ್ರೆ ಸೇರಿದ್ದು, ಮಂಡಳಿ ವಿರುದ್ಧ ನ್ಯಾಯಾಲಯ ದೂರು ನೀಡಲು ಕುಟುಂಬ ನಿರ್ಧರಿಸಿದೆ. 
 
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯುತ್‌ ಮಂಡಳಿ ಎಂಜಿನಿಯರ್ ರಾಜ್ ಕುಮಾರ್, "ಮೀಟರ್‌ ರೀಡಿಂಗ್‌ ಹೋದವರು ಮಾಡಿದ ತಪ್ಪಿನಿಂದ ಹೀಗಾಗಿದೆ. ಈಗ ನಾವದನ್ನು ಸರಿಪಡಿಸಿದ್ದೇವೆ. ನಿಜವಾಗಿಯೂ ನಾವು ಅವರಿಗೆ ನೀಡಬೇಕಾದಿದ್ದು 10,500 ಬಿಲ್", ಎಂದಿದ್ದಾರೆ. 
 
ಅದಕ್ಕೆ ಪ್ರತಿಕ್ರಿಯಿಸಿರುವ ಜಿತೇಂದ್ರ, "ನಮಗೆ ಬರಬೇಕಾಗಿರುವುದು 2,400 ಅಷ್ಟೇ, 10,500 ಅಲ್ಲ", ಎನ್ನುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ