ಶಾಸಕನ ಸಮ್ಮುಖದಲ್ಲೇ ನಡೆಯಿತು ಗಂಡ-ಹೆಂಡಿರ ಕಿಸ್ಸಿಂಗ್ ಸ್ಪರ್ಧೆ!

ಸೋಮವಾರ, 11 ಡಿಸೆಂಬರ್ 2017 (10:42 IST)
ರಾಂಚಿ: ಜಾರ್ಖಂಡ್ ನ ಬುಡಕಟ್ಟು ಸಮುದಾಯದವರಿಗಾಗಿಯೇ ಶಾಸಕರೊಬ್ಬರ ಉಪಸ್ಥಿತಿಯಲ್ಲೇ ಕಿಸ್ಸಿಂಗ್ ಸ್ಪರ್ಧೆ ನಡೆದಿದೆ!
 

ಜಾರ್ಖಂಡ್ ನ ಪಾಖ್ರು ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಇಂತಹದ್ದೊಂದು ವಿಚಿತ್ರ ಕಾರ್ಯಕ್ರಮ ನಡೆದಿದೆ. ಶಾಸಕ ಸಿಮನ್ ಮರಾಂಡಿ ಕೂಡಾ ಅಲ್ಲಿಯೇ ಇದ್ದರು ಎನ್ನುವುದು ವಿಶೇಷ.

ಸ್ವತಃ ಶಾಸಕ ಮರಾಂಡಿ ಪ್ರತೀ ವರ್ಷ ಬುಡಕಟ್ಟು ಸಮುದಾಯದವರಿಗಾಗಿ ನಡೆಸುವ ಒಂದು ಮೇಳ ಇದಾಗಿದೆ. ಇಲ್ಲಿ ವಿವಾಹಿತ ಬುಡಕಟ್ಟು ಸಮುದಾಯದ ಗಂಡು-ಹೆಣ್ಣು ಪರಸ್ಪರ ಸಾರ್ವಜನಿಕವಾಗಿ ಕಿಸ್ ನೀಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವಿಚಾರ ಇದೀಗ ವಿವಾದಕ್ಕೊಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ