ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿಯ ರೇಪ್ ಮಾಡಿ ಆರೋಪಿಗಳು ವಿಡಿಯೋ ಮಾಡಿದ್ದೇಕೆ

Krishnaveni K

ಗುರುವಾರ, 3 ಜುಲೈ 2025 (14:11 IST)
Photo Credit: X
ಕೋಲ್ಕತ್ತಾ: ಇಲ್ಲಿನ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದು ವಿಚಾರಣೆ ವೇಳೆ ಬಯಲಾಗಿದೆ.

24 ವರ್ಷದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ದುರುಳರು ವಿಡಿಯೋ ಕೂಡಾ ಮಾಡಿಕೊಂಡಿದ್ದರು. ಪ್ರಮುಖ ಆರೋಪಿ ಮನೋಜಿತ್ ಮಿಶ್ರಾಗೆ ವಿದ್ಯಾರ್ಥಿನಿ ಮೇಲೆ ಪ್ರೇಮವಿತ್ತು. ಆದರೆ ಆಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಪಾಠ ಕಲಿಸುವುದಾಗಿ ತನ್ನ ಸಂಗಡಿಗರಿಗೆ ಹೇಳಿದ್ದನಂತೆ.

ಅದರಂತೆ ರೇಪ್ ಮಾಡಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ರೇಪ್ ಮಾಡುವಾಗ ತನ್ನ ಸಂಗಡಿಗರಿಗೆ ವಿಡಿಯೋ ಮಾಡಲು ಹೇಳಿದ್ದನಂತೆ. ವಿಡಿಯೋ ಮಾಡಿದರೆ ಮುಂದೆ ಆಕೆ ಪೊಲೀಸರಿಗೆ ದೂರು ನೀಡಲು ಮುಂದಾದರೆ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕಬಹುದು ಎಂಬುದು ಆತನ ಲೆಕ್ಕಾಚಾರವಿತ್ತು.

ರೇಪ್ ಮಾಡಿದ ಬಳಿಕ ವಿದ್ಯಾರ್ಥಿನಿ ಎಲ್ಲಿ ತನ್ನ ಮೇಲೆ ದೂರು ಕೊಡುತ್ತಾಳೋ ಎಂದು ಮನೋಜಿತ್ ಪೊಲೀಸ್ ಠಾಣೆ ಮೇಲೆ ಕಣ್ಣಿರಿಸಿದ್ದನಂತೆ. ಆಕೆ ಪೊಲೀಸರಿಗೆ ದೂರು ಕೊಡಲು ಹೋಗುತ್ತಾಳೆ ಎಂದಾಗ ಲಾಯರ್ ಗಳನ್ನು ಸಂಪರ್ಕಿಸಲು ಮುಂದಾಗಿದ್ದಾನೆ. ಆದರೆ ಯಾರೂ ನೆರವಿಗೆ ಬಂದಿರಲಿಲ್ಲ ಎಂದು ಪೊಲೀಸ್  ವಿಚಾರಣೆಯಲ್ಲಿ ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ