ಪ್ರಧಾನಿ ಮೋದಿ ದಿಢೀರ್ ಆಗಿ ದೊಡ್ಡ ಮುಖಬೆಲೆ ನೋಟುಗಳನ್ನು ರದ್ದುಗೊಳಿಸಿದ್ದು ಆಸ್ಪತ್ರೆ, ಅಂಗಡಿ ಸೇರಿದಂತೆ ಎಲ್ಲು ಕೂಡ ಹಳೆಯ ನೋಟುಗಳನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಆದರೆ ಸೆಕ್ಸ್ ವರ್ಕರ್ಸ್ ಈ ಬದಲಾವಣೆಯನ್ನು ಅಳವಡಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಕೋಲ್ಕತ್ತಾದ ಕುಖ್ಯಾತ ರೆಡ್ ಲೈಟ್ ಪ್ರದೇಶದಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವ ಮಹಿಳೆಯರಿಗೆ ಕೇಂದ್ರ ಸರ್ಕಾರದ ಈ ನಡೆ ಅತ್ತ ಉಗುಳಲೂ ಆಗದ, ಇತ್ತ ನುಂಗಲು ಆಗದ ಪರಿಸ್ಥಿತಿಯನ್ನು ತಂದೊಡ್ಡಿದೆ. ಒಂದು ವೇಳೆ ಅವರು ಹಳೆಯ ನೋಟುಗಳನ್ನು ನಿರಾಕರಿಸಿದರೆ ಅವರ ದಂಧೆಗೆ ಪೆಟ್ಟು ಬೀಳುತ್ತದೆ. ಒಪ್ಪಿ ಹಣ ತೆಗೆದುಕೊಂಡು ಅದನ್ನು ಬ್ಯಾಂಕ್‌ನಲ್ಲಿ ಬದಲಾಯಿಕೊಳ್ಳೋಣವೆಂದುಕೊಂಡರೆ ಅವರ ಬಳಿ ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲ. ಅವರ ಬಾಗಿಲಲ್ಲಿಗ ಅಘೋಷಿತ ಸಂಕಟ ಬಂದು ನಿಂತಿದೆ.