Kumbhmela: ಕುಂಭಮೇಳಕ್ಕೆ ಬಂದು ನಮ್ಮ ಜಾಗ ಎಂದರೆ ಹುಷಾರ್: ವಕ್ಫ್ ಬೋರ್ಡ್ ಗೆ ಸಿಎಂ ಯೋಗಿ ಎಚ್ಚರಿಕೆ

Krishnaveni K

ಸೋಮವಾರ, 13 ಜನವರಿ 2025 (10:08 IST)
ಲಕ್ನೋ: ಇಂದಿನಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳಕ್ಕೆ ಚಾಲನೆ ಸಿಗಲಿದ್ದು, ಮೇಳಕ್ಕೆ ಬಂದು ಜಾಗ ನಮ್ಮದು ಎಂದು ಹೇಳಬೇಡಿ ಎಂದು ವಕ್ಫ್ ಬೋರ್ಡ್ ಗೆ ಸಿಎಂ ಯೋಗಿ ಆದಿತ್ಯನಾಥ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ಆಯೋಜಿಸಿರುವ ಬೆನ್ನಲ್ಲೇ ಮುಸ್ಲಿಂ ಧರ್ಮ ಗುರುವೊಬ್ಬರು ಉತ್ತರ ಪ್ರದೇಶ ಸರ್ಕಾರ ವಕ್ಫ್ ಬೋರ್ಡ್ ಗೆ ಸೇರಿದ ಜಾಗದಲ್ಲಿ ಕುಂಭಮೇಳ ಆಯೋಜಿಸುತ್ತಿದೆ ಎಂದು ಸುದ್ದಿ ವಾಹಿನಿಯೊಂದರಲ್ಲಿ ತಗಾದೆ ತೆಗೆದಿದ್ದರು.

ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದ ‘ಭಾರತದ ಸಂಸ್ಕೃತಿಯನ್ನು ಗೌರವಿಸುವ ಯಾರೇ ಆದರೂ ಕುಂಭಮೇಳಕ್ಕೆ ಪ್ರಯಾಗ್ ರಾಜ್ ಗೆ ಬಂದರೆ ಸ್ವಾಗತ. ಆದರೆ ಕೆಟ್ಟ ಆಲೋಚನೆ ಇಟ್ಟುಕೊಂಡು ಬರುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಕುಂಭಮೇಳಕ್ಕೆ ಭಾರತದ ಇತಿಹಾಸದ ಪ್ರತೀಕ. ಇದನ್ನು ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ವಕ್ಫ್ ಬೋರ್ಡ್ ಲ್ಯಾಂಡ್ ಮಾಫಿಯಾ ಆಗಿ ಬದಲಾಗಿದೆ. ವಕ್ಫ್ ಹೆಸರು ಕೇಳುತ್ತಿದ್ದಂತೆ ಯಾರ ಹೆಸರಿನಲ್ಲಿ ಭೂಮಿ ನೋಂದಣಿಯಾಗಿದೆ ಎಂದು ತನಿಖೆ ಮಾಡುತ್ತೇವೆ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ