ಗಿಫ್ಟ್ ನೀಡೋ ನೆಪದಲ್ಲಿ ಲಕ್ಷಗಟ್ಟಲೇ ವಂಚನೆ !
ಜನವರಿ ತಿಂಗಳಿನಲ್ಲಿ 48 ವರ್ಷದ ಮಹಿಳೆಗೆ ಫೇಸ್ಬುಕ್ನಲ್ಲಿ ವ್ಯಕ್ತಿ ಹಾಗೂ ಮಹಿಳೆ ರಿಕ್ವೆಸ್ಟ್ ಕಳುಹಿಸಿದ್ದರು. ಜೊತೆಗೆ ಇಬ್ಬರು ಲಂಡನ್ ಮೂಲದ ನರಶಸ್ತ್ರಚಿಕಿತ್ಸಕರು ಎಂದು ಹೇಳಿಕೊಂಡಿದ್ದರು.
ನಂತರ ಆಗಸ್ಟ್ನಲ್ಲಿ ಇಬ್ಬರೂ ಸೇರಿ ಮಹಿಳೆಗೆ ದುಬಾರಿ ಉಡುಗೊರೆಯನ್ನು ಕಳುಹಿಸಿರುವುದಾಗಿ ಮಹಿಳೆಗೆ ಸಂದೇಶ ಕಳುಹಿಸಿದ್ದಾರೆ. ಆದರೆ ಅದನ್ನು ಕಸ್ಟಮ್ಸ್ನಿಂದ ತೆರವುಗೊಳಿಸಲು ಸ್ವಲ್ಪ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.