ಜೈಲಲ್ಲಿ ನೆಗಡಿಯಾಗ್ತಿದೆ ಎಂದು ದೂರಿದ ಲಾಲೂ ಪ್ರಸಾದ್ ಯಾದವ್ ಗೆ ನ್ಯಾಯಾಧೀಶರು ಕೊಟ್ಟ ಉತ್ತರವೇನು ಗೊತ್ತಾ?
‘ಶೀತ ಎನಿಸಿದರೆ ತಬಲಾ ಅಥವಾ ಹಾರ್ಮೋನಿಯಂ ಬಾರಿಸಿ. ಚಳಿಯೆಲ್ಲಾ ಓಡಿ ಹೋಗುತ್ತದೆ. ಇನ್ನು, ನಿಮಗೆ ಯಾರನ್ನೂ ಭೇಟಿಯಾಗಲು ಅವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೇ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ’ ಎಂದು ನ್ಯಾಯಾಧೀಶರು ತಿರುಗೇಟು ನೀಡಿದ್ದಾರೆ.
ಮೇವು ಹಗರಣದಲ್ಲಿ ಆರೋಪಿ ಎಂದು ಸಾಬೀತಾಗಿ ರಾಂಚಿ ಜೈಲಿನಲ್ಲಿರುವ ಲಾಲೂ ಯಾದವ್ ಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅದಕ್ಕಾಗಿ ಅವರು ಇಂದು ವಿಶೇಷ ನ್ಯಾಯಾಯಲದ ಎದುರು ಹಾಜರಾಗಲಿದ್ದಾರೆ.