ಎಣ್ಣೆ ಹೊಡೆಯೋರ ಕಿಕ್ ಇಳಿಸೋ ಸುದ್ದಿ ಕೊಟ್ಟಿದೆ ಗೋವಾ
ಇದಕ್ಕಿಂತ ಮೊದಲು ರಾಜ್ಯ ಸರ್ಕಾರ ಗೋವಾ ಸಮುದ್ರ ತೀರದಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿತ್ತು. ಇದೀಗ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ನಿಷೇಧಿಸಿದೆ. ಆದೇಶ ಉಲ್ಲಂಘಿಸಿ ಸಮಸ್ಯೆ ಉಂಟು ಮಾಡಿದರೆ ಅಂತಹವರನ್ನು ಬಂಧಿಸಲೂ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಇನ್ನು ಮುಂದೆ ಇಲ್ಲಿ ಮದ್ಯಪಾನ ಮಾಡುವವರಿದ್ದರೆ ತಮ್ಮ ಮನೆಯೊಳಗೆ ಅಥವಾ ನಾಲ್ಕು ಗೋಡೆಯ ಮಧ್ಯೆ ಯಾರಿಗೂ ತೊಂದರೆಯಾಗದಂತೆ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.