ಕಾಂಗ್ರೆಸ್ ಸರ್ಕಾರದಲ್ಲಿ 'ಹನುಮಾನ್ ಚಾಲೀಸಾ' ಆಲಿಸುವುದು ಅಪರಾಧ: ಮೋದಿ ವಾಗ್ದಾಳಿ

Sampriya

ಮಂಗಳವಾರ, 23 ಏಪ್ರಿಲ್ 2024 (14:08 IST)
ಜೈಪುರ: ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯದಲ್ಲಿ 'ಹನುಮಾನ್ ಚಾಲೀಸಾ' ಆಲಿಸುವುದು ಅಪರಾಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ಟೊಂಕ್‌ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿ, ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಮೊಬೈಲ್‌ ಶಾಪ್‌ವೊಂದರಲ್ಲಿ ಹನುಮಾನ್‌ ಚಾಲೀಸಾ ಆಲಿಸುತ್ತಿದ್ದ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿರುವುದನ್ನು ಅವರು ಉಲ್ಲೇಖಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿ ಒಬ್ಬರ ನಂಬಿಕೆಯನ್ನು ಗೌರವಿಸುವುದೂ ಕಷ್ಟ ಎಂದು ಎಂದು ಟೀಕಿಸಿರುವ ಮೋದಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ ಎಂದು ಪುನರುಚ್ಚರಿಸಿದರು.

ದೇಶದ ಸಂಪತ್ತನ್ನು ಕಿತ್ತುಕೊಂಡು ಆಯ್ದ ಜನರಿಗೆ ಹಂಚಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂಬ ಸತ್ಯವನ್ನು ನಾನು ಬಹಿರಂಗ ಮಾಡಿದ್ದೇನೆ. ಕಾಂಗ್ರೆಸ್ ಏಕೆ ಸತ್ಯಕ್ಕೆ ಹೆದರುತ್ತದೆ? ತನ್ನ ನೀತಿಗಳನ್ನು ಏಕೆ ಮರೆಮಾಚುತ್ತದೆ ? ಎರಡು ಮೂರು ದಿನಗಳ ಹಿಂದೆ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣವನ್ನು ಬಯಲು ಮಾಡಿದ್ದೆ. ಇದಾದ ಬಳಿಕ ಕಾಂಗ್ರೆಸ್ ಹಾಗೂ ಅದರ 'ಇಂಡಿ' ಮೈತ್ರಿಕೂಟ ಎಲ್ಲ ಕಡೆ ಮೋದಿಯನ್ನು ನಿಂದಿಸಲು ಪ್ರಾರಂಭಿಸಿದೆ' ಎಂದು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ