ಲಾಕ್ ಡೌನ್ ವಿಸ್ತರಣೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ!

ಬುಧವಾರ, 15 ಏಪ್ರಿಲ್ 2020 (09:20 IST)
ಬೆಂಗಳೂರು: ಇನ್ನೂ 19 ದಿನಗಳವರೆಗೆ ಪ್ರಧಾನಿ ಮೋದಿ ಲಾಕ್ ಡೌನ್ ವಿಸ್ತರಣೆ ಮಾಡುವ ಆದೇಶ ಮಾಡಿದ ಮೇಲೆ ಎಷ್ಟೋ ಜನರ ಸಹನೆ ಕಟ್ಟೆಯೊಡೆದಿರಬಹುದು. ಆದರೆ ಬೇರೆ ದಾರಿಯೂ ಇಲ್ಲ. ಇನ್ನು ಮುಂದೆಯೂ ವಿಸ್ತರಣೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.


ಕೊರೋನಾ ಹರಡದಂತೆ ತಡೆಯಲು ಕೇಂದ್ರ ಸರ್ಕಾರಕ್ಕೆ ಲಾಕ್ ಡೌನ್ ವಿಸ್ತರಿಸದೇ ಬೇರೆ ದಾರಿಯಿಲ್ಲ. ಭಾಗಶಃ ಲಾಕ್ ಡೌನ್ ಮಾಡಿದರೆ ಜನರು ಮಾತು ಕೇಳುವ ಸ್ಥಿತಿಯಲ್ಲೇ ಇಲ್ಲ. ನಿಯಮ ಉಲ್ಲಂಘಿಸುವವರೇ ಹೆಚ್ಚು. ಹೀಗಾಗಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

ಸದ್ಯಕ್ಕೆ ಮೇ 3 ರವರೆಗೆ ನಾವು ಕಾಯಲೇಬೇಕು. ಈ ಅವಧಿಯಲ್ಲೂ ನಾವು ಸಂಯಮ ಕಾಯ್ದುಕೊಂಡು ಮನೆಯಲ್ಲಿರದೇ ಮತ್ತಷ್ಟು ರೋಗ ಹರಡುವಿಕೆಗೆ ಕಾರಣರಾದರೆ ನಮ್ಮ ಮೈ ಮೇಲೆ ನಾವೇ ಚಪ್ಪಡಿ ಎಳೆದಂತೆ. ಲಾಕ್ ಡೌನ್ ಮತ್ತಷ್ಟು ವಿಸ್ತರಣೆ ಮಾಡದೇ ಕೇಂದ್ರಕ್ಕೆ ಬೇರೆ ದಾರಿಯಿರುವುದಿಲ್ಲ. ಹೀಗಾಗಿ ಲಾಕ್ ಡೌನ್ ನಿಂದ ಮುಕ್ತಿ ಪಡೆಯುವುದು ಬಿಡುವುದು ನಮ್ಮ ಕೈಯಲ್ಲೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ