ನವದೆಹಲಿ : ದೇಶದಲ್ಲಿ ಲಾಕ್ ಡೌನ್ 4.0 ಫಿಕ್ಸ್ ಆಗಿದ್ದು, ಹೊಸ ನಿಯಮದೊಂದಿಗೆ ಲಾಕ್ ಡೌನ್ 4.0 ಜಾರಿಗೆ ಬರಲಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಹೊಸ ನಿಯಮ ರೂಪುರೇಷೆಯೊಂದಿಗೆ ಲಾಕ್ ಡೌನ್ 4.0 ಜಾರಿಗೆ ತರಲಿದ್ದು, ಈ ಲಾಕ್ ಡೌನ್ ಬೊಕ್ಕಸಕ್ಕೂ ಸಹಕಾರಿ.ದೇಶದ ಜನಕ್ಕೂ ಉಪಕಾರಿಯಾಗಲಿದೆ ಎನ್ನಲಾಗಿದೆ.
ಈ ವೇಳೆ ಕಂಟೈನ್ಮೆಂಟ್ ಝೋನ್ ಬಿಟ್ಟು ಬೇರೆಡೆ ವಿನಾಯಿತಿ ನೀಡಲಿದೆ. ಸೋಂಕಿತ ಪ್ರದೇಶದಲ್ಲಿ ರಾತ್ರಿ ನಿಷೇಧ ಮುಂದುವರಿಕೆಯಾಗಲಿದ್ದು, ಸೋಂಕಿಲ್ಲದ ಕಡೆ ಸಂಪೂರ್ಣ ಆರ್ಥಿಕ ಚಟುವಟಿಕೆ ನಡೆಯಲಿದೆ ಎನ್ನಲಾಗಿದೆ. ಶೀಘ್ರವೇ ಕೇಂದ್ರದಿಂದ ಮತ್ತೊಂದು ಮಾರ್ಗಸೂಚಿ ಹೊರಬೀಳಲಿದೆ.