ದೇವಾಲಯ ತೆರೆಯದೇ ಆದಾಯವಿಲ್ಲ: ಅರ್ಚಕರ ಅಳಲು

ಬುಧವಾರ, 13 ಮೇ 2020 (09:13 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಪ್ರಮುಖ ದೇವಾಲಯಗಳೇ ಬಾಗಿಲು ಬಂದ್ ಮಾಡಿ ಕೂತಿವೆ. ನಿತ್ಯದ ಪೂಜೆ ಬಿಟ್ಟರೆ ಬೇರೆ ಯಾವುದೇ ಸೇವೆಗಳು ನಡೆಯುತ್ತಿಲ್ಲ. ಈ ನಡುವೆ ಮದ್ಯದಂಗಡಿ ತೆರೆದಿರುವಾಗ ದೇವಾಲಯ ತೆರೆಯಲೂ ಅವಕಾಶ ನೀಡೋದಿಲ್ಲ ಯಾಕೆ ಎಂದು ಅರ್ಚಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.


ದೇವಾಲಯಗಳು ಮುಚ್ಚಿರುವುದರಿಂದ ಕೇವಲ ಅರ್ಚಕರಿಗೆ ಮಾತ್ರವಲ್ಲ, ದೇವಾಲಯವನ್ನೇ ನಂಬಿ ಬದುಕುವ ಹಲವರ ಬದುಕು ಅತಂತ್ರವಾಗಿದೆ. ದೇವಾಲಯ ಹುಂಡಿಗೆ ಆದಾಯ ಬರುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ, ದೇವಾಲಯದ ಬಳಿ ಹೂ, ಹಣ್ಣು ಕಾಯಿ ಮುಂತಾದ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರ ಬದುಕು ಮೂರಾಬಟ್ಟೆಯಾಗಿದೆ.

ದೇವಾಲಯ ಸದ್ಯದಲ್ಲೇ ತೆರೆಯದಿದ್ದರೆ ಇವರ ಬದುಕು ಬೀದಿ ಪಾಲಾಗಲಿದೆ. ಹೀಗಾಗಿ ಕೆಲವು ನೀತಿ ನಿಯಮಗಳನ್ನು ರೂಪಿಸಿ ದೇವಾಲಯ ತೆರವಿಗೆ ಅನುವು ಮಾಡಿಕೊಡಬೇಕು ಎಂದು ಅರ್ಚಕರು ಆಗ್ರಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ