ಲೋಕಸಭೆಯಲ್ಲಿ ಮುಂದುವರೆದ ನೋಟ್ ಬ್ಯಾನ್ ಗದ್ದಲ

ಗುರುವಾರ, 15 ಡಿಸೆಂಬರ್ 2016 (11:28 IST)
ಚಳಿಗಾಲದ ಅಧಿವೇಶನ ಸಂಪೂರ್ಣವಾಗಿ ವಾಶ್ ಔಟ್ ಆಗುವುದರತ್ತ ಸಾಗಿದೆ. ಲೋಕಸಭೆಯಲ್ಲಿ ನೋಟ್ ನಿಷೇಧ ಗದ್ದಲ ಇಂದು ಕೂಡ ಮುಂದುವರೆದಿದೆ.

ಕಲಾಪ ಆರಂಭವಾಗುತ್ತಿದ್ದಂತೆ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಆರಂಭವಾದ ಕೆಲವೇ ಕ್ಷಣಗಳಲ್ಲಿ ಕಲಾಪ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ ಕಂಡಿದೆ.
 
ರಾಜ್ಯಸಭೆಯಲ್ಲಿ ಕೂಡ ನೋಟ್ ಬ್ಯಾನ್ ಗದ್ದಲ ಮುಂದುವರೆದಿದ್ದು, ಪ್ರತಿಪಕ್ಷಗಳ ಗಲಾಟೆಯನ್ನು ಸ್ಪೀಕರ್ ಅತ್ಯುಗ್ರವಾಗಿ ಖಂಡಿಸಿದ್ದಾರೆ. ಜತೆಗೆ ಕಲಾಪವನ್ನು 12ಗಂಟೆಗೆ ಮುಂದೂಡಿದ್ದಾರೆ. 
 
ನಾಲ್ಕು ದಿನಗಳ ಸುದೀರ್ಘ ರಜೆಯ ಬಳಿಕ ಬುಧವಾರ ಆರಂಭಗೊಂಡ ಸಂಸತ್ ಕಲಾಪವನ್ನು ನೋಟು ನಿಷೇಧ ಮತ್ತು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರ ಮೇಲೆ ಬಂದಿರುವ ಆರೋಪ ನುಂಗಿ ಹಾಕಿತ್ತು. ಹೀಗಾಗಿ ನಿನ್ನೆ ಕಲಾಪವನ್ನು ಇಂದಿಗೆ ಮುಂಡೂಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ