Lok Sabhaa election 2024: ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಬಿಗ್ ಆಫರ್ ನೀಡಿದ ಇಂಡಿಯಾ ಒಕ್ಕೂಟ

Krishnaveni K

ಮಂಗಳವಾರ, 4 ಜೂನ್ 2024 (15:32 IST)
ನವದೆಹಲಿ: ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟಗಳು ಈಗ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಟಿಡಿಪಿ ನಾಯ ಕಚಂದ್ರಬಾಬು ನಾಯ್ಡು ಹಿಂದೆ ಬಿದ್ದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಇಂಡಿಯಾ ಒಕ್ಕೂಟ ಎರಡಕ್ಕೂ ಬಹುಮತವಿಲ್ಲ. ಸರ್ಕಾರ ರಚಿಸಬೇಕಾದರೆ ಎರಡೂ ಒಕ್ಕೂಟಗಳಿಗೂ ಬಿಹಾರದ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬೆಂಬಲ ಬೇಕು.

ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈ ಎರಡೂ ಪಕ್ಷಗಳ ನಾಯಕರಿಗೆ ಬಿಗ್ ಆಫರ್ ನೀಡುತ್ತಿದ್ದಾರೆ. ಇತ್ತ ಇಂಡಿಯಾ ಒಕ್ಕೂಟ ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟದ ಆಫರ್ ನ್ನೇ ನೀಡಿದೆ.  ಇನ್ನು, ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವ ಭರವಸೆ ನೀಡಿದೆ. ಇಂಡಿಯಾ ಒಕ್ಕೂಟದ ಈ ಬಿಗ್ ಆಫರ್ ಗೆ ಈ ಇಬ್ಬರೂ ನಾಯಕರು ಮಣಿಯುತ್ತಾರಾ ನೋಡಬೇಕಿದೆ.

ಇನ್ನೊಂದೆಡೆ ಬಿಜೆಪಿ ನಾಯಕರೂ ಈ ಇಬ್ಬರೂ ನಾಯಕರನ್ನು ತಮ್ಮಲ್ಲೇ ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸಿದೆ. ಚಂದ್ರಬಾಬು ನಾಯ್ಡುಗೆ ಎನ್ ಡಿಎ ಸಂಚಾಲಕ ಹುದ್ದೆಯ ಆಫರ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ