ನವದೆಹಲಿ: ಲೋಕಸಭಾ ಚುನಾವಣೆ 2024 ರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ ಇದೀಗ ಎನ್ ಡಿಎ ಒಕ್ಕೂಟ ಇದೀಗ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯಾ ಒಕ್ಕೂಟ 217 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು 56 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಆರಂಭಿಕ ಟ್ರೆಂಡ್ ನೋಡಿದರೆ ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟ ಎರಡೂ ಬಣಗಳಲ್ಲಿ ಢವ ಢವ ಶುರುವಾಗಿದೆ. ಈ ಆರಂಭಿಕ ಟ್ರೆಂಡ್ ಇಂಡಿಯಾ ಒಕ್ಕೂಟದಲ್ಲಿ ಹೆಚ್ಚು ನಿರಾಳತೆ ಮೂಡಿಸಿರಬಹುದು. ಯಾಕೆಂದರೆ ಆರಂಭದ ಅರ್ಧಗಂಟೆಯಲ್ಲಿ ಇಂಡಿಯಾ ಒಕ್ಕೂಟ ಭಾರೀ ಹಿನ್ನಡೆಯಲ್ಲಿದೆ.
ಆದರೆ ಇದೀಗ ಎನ್ ಡಿಎ ಇನ್ನೂ 300 ರ ಗಡಿ ದಾಟಿಲ್ಲ. ಅತ್ತ ಇಂಡಿಯಾ ಒಕ್ಕೂಟ ಮುನ್ನಡೆ ಹೆಚ್ಚುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗುತ್ತಿದೆ. ಬಿಹಾರದಲ್ಲಿ ಎರಡೂ ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಮುಂದುವರಿದೆ. ಆರಂಭಿಕ ಟ್ರೆಂಡ್ ಗಮನಿಸಿದರೆ ಇತರರು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸದ್ಯಕ್ಕೆ ಈಗ ನಡೆಯುತ್ತಿರುವ ಟ್ರೆಂಡ್ ಎರಡೂ ಒಕ್ಕೂಟದ ಎಸೆಬಡಿತ ಹೆಚ್ಚಿಸಿದೆ. ಇದೇ ರೀತಿ ಮುಂದುವರಿದರೆ ಇಂಡಿಯಾ ಒಕ್ಕೂಟದ ಆತ್ಮವಿಶ್ವಾಸ ಹೆಚ್ಚಲಿದೆ.