ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 2024 ರ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದ್ದು ಕಣದಲ್ಲಿ ಘಟಾನುಘಟಿ ನಾಯಕರ ದಂಡೇ ಇದೆ. ಇಂದು ಸ್ಪರ್ಧೆಯಲ್ಲಿರುವ ಪ್ರಮುಖರು ಮತ್ತು ಅವರ ಕ್ಷೇತ್ರಗಳು ಯಾವುವು ನೋಡೋಣ.
ಇಂದು ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ ಎಲ್ಲಾ 25 ಕ್ಷೇತ್ರಗಳು, ತೆಲಂಗಾಣದ 17, ಉತ್ತರಪ್ರದೇಶದ 13, ಮಹಾರಾಷ್ಟ್ರದ 11, ಪಶ್ಚಿಮ ಬಂಗಾಲದ 8, ಮಧ‍್ಯಪ್ರದೇಶದ 8, ಬಿಹಾರದ ತಲಾ 5, ಒಡಿಶಾ, ಜಾರ್ಖಂಡ್ ನ ತಲಾ 4, ಜಮ್ಮು ಕಾಶ್ಮೀರದ ಒಂದು ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ.
ಪಶ್ಚಿಮ ಬಂಗಾದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಮಹುವಾ ಮೊಯಿತ್ರಾ, ಕಾಂಗ್ರೆಸ್ ಅಧ್ಯಕ್ಷ ನಿರ್ಮಲ್ ಅಧೀರ್ ರಂಜನ್ ಚೌಧರಿ, ಹೈದರಾಬಾದ್ ನಲ್ಲಿ ಬಿಜೆಪಿಯ ಮಾಧವಿ ಲತಾ ವಿರುದ್ಧ ಅಸಾವುದ್ದೀನ್ ಒವೈಸಿ, ಉತ್ತರ ಪ್ರದೇಶದ ಕನೌಜ್ ನಲ್ಲಿ ಅಖಿಲೇಶ್ ಯಾದವ್, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ, ಜಾರ್ಖಂಡ್ ನಲ್ಲಿ ಅರ್ಜುನ್ ಮುಂಡಾ, ಪಶ್ಚಿಮ ಬಂಗಾಲದಲ್ಲಿ ಶತ್ರುಘ್ನ ಸಿನ್ಹ, ಬಿಹಾರದಲ್ಲಿ ಗಿರಿರಾಜ್ ಸಿಂಗ್ ಈ ಬಾರಿ ಕಣದಲ್ಲಿರುವ ಘಟಾನುಘಟಿ ಅಭ್ಯರ್ಥಿಗಳಾಗಿದ್ದಾರೆ.
10 ರಾಜ್ಯಗಳ 96 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಅತೀ ಹೆಚ್ಚು ನಾಮಿನೇಷನ್ ಫೈಲ್ ಆಗಿದೆ. ಮತದಾನಕ್ಕೆ ಬೆಳಿಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.