ಟಿಟಿವಿ ದಿನಕರನ್ ವಿರುದ್ಧ ಲುಕೌಟ್ ನೋಟಿಸ್ ಜಾರಿ

ಬುಧವಾರ, 19 ಏಪ್ರಿಲ್ 2017 (08:51 IST)
ಅಣ್ಣಾಡಿಎಂಕೆ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚದ ಆಮಿಷವೊಡ್ಡಿದ ಆರೋಪ ಎದುರಿಸುತ್ತಿರುವ ಆಣ್ಣಾಡಿಎಂಕೆ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಬಂಧನಕ್ಕೆ  ದೆಹಲಿ ಪೊಲೀಸರು ಮುಂದಾಗಿದ್ದು, ಲುಕೌಟ್ ನೋಟಿಸ್ ಹೊರಡಿಸಲಾಗಿದೆ.

ದಿನಕರನ್ ದೇಶ ಬಿಟ್ಟು ತೆರಳುವ ಸಂಶಯದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ನೀಡಲಾಗಿದ್ದು, ಚೆನ್ನೇಗೆ ಬಂದಿಳಿದಿರುವ ದೆಹಲಿ ಪೊಲೀಸ್ ತಂಡ ಯಾವುದೇ ಕ್ಷಣದಲ್ಲಿ ದಿನಕರನ್ ಅವರನ್ನ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪನ್ನೀರ್ ಸೆಲ್ವಂ ಬಣ ಮತ್ತು ಶಶಿಕಲಾ ಬಣಗಳ ನಡುವೆ ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಗಾಗಿ ತಿಕ್ಕಾಟ ಏರ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಚಿಹ್ನೆಯನ್ನ ಸ್ಥಗಿತಗೊಳಿಸಿತ್ತು. ಹೀಗಾಗಿ, ಏನಾದರೂ ಮಾಡಿ ಆ ಚಿಹ್ನೆಯನ್ನ ಪಡೆಯಲು ಮುಂದಾಗಿದ್ದ ದಿನಕರನ್ 60 ಕೋಟಿ ಹಣದ ಆಮಿಷ ಇಟ್ಟಿದ್ದರು ಎಂಬುದು ಆರೋಪ. ದೆಹಲಿ ಹೋಟೆಲ್ ಒಂದರಲ್ಲಿ ಮಧ್ಯವರ್ತಿ ಸುಖೇಶ್ ಚಂದರ್ ಎಂಬಾತನನ್ನ ಬಂಧಿಸಿದ್ದ ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಸುಖೇಶ್ ಬಳಿ 1.5 ಕೋಟಿ ರೂ. ಹಣವನ್ನೂ ವಶಪಡಿಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ